December 22, 2024

Newsnap Kannada

The World at your finger tips!

money2

22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ

Spread the love

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬರೊಬ್ಬರಿ 16.10 ಕೋಟಿ ಮೌಲ್ಯದ 22 ಕೆಜಿ 923 ಗ್ರಾಂ ಚಿನ್ನ, 6 ಕೋಟಿ 45 ಲಕ್ಷ ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದೆ. 1.33 ಕೋಟಿ ನಗದು ಪತ್ತೆಯಾಗಿದೆ.

ಶಂಕರಪುರದಲ್ಲಿ 3 ಕೋಟಿಗೂ ಅಧಿಕ ಮೌಲ್ಯದ 4 ಕೆಜಿ 400 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.ಮರ್ಕೈಂಟಲ್ ಬ್ಯಾಂಕ್ ಬಳಿ 2 ಕೋಟಿ 13 ಲಕ್ಷ ಮೌಲ್ಯದ 3 ಕೆಜಿ 400 ಗ್ರಾಂ, ಜಯನಗರ 3ನೇ ಬ್ಲಾಕ್​ನಲ್ಲಿ 5 ಕೋಟಿ 33 ಲಕ್ಷ ಮೌಲ್ಯದ 7 ಕೆಜಿ 598 ಗ್ರಾಂ, ಶಾರದದೇವಿ ರಸ್ತೆಯಲ್ಲಿ 3 ಕೋಟಿ 39 ಲಕ್ಷ ಮೌಲ್ಯದ 4 ಕೆಜಿ 800 ಗ್ರಾಂ,ಚಾಮರಾಜಪೇಟೆಯಲ್ಲಿ 84 ಮೌಲ್ಯದ 1 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆಯಾಗಿದೆ.

3 ಲಕ್ಷ 34 ಸಾವಿರ ಮೌಲ್ಯದ 6.38 ಕ್ಯಾರೆಟ್ ವಜ್ರ ಬಸವನಗುಡಿ ಅಂಚೆ ಕಚೇರಿ ಬಳಿ,ಮಾತಾ ಶಾರದಾ ದೇವಿ ರಸ್ತೆಯಲ್ಲಿ 3 ಲಕ್ಷದ 14 ಸಾವಿರ ಮೌಲ್ಯದ 5.99 ಕ್ಯಾರೆಟ್ ವಜ್ರ, ಜಯನಗರದಲ್ಲಿ 6 ಕೋಟಿ 40 ಲಕ್ಷ ಮೌಲ್ಯದ 202.83 ಕ್ಯಾರೆಟ್ ವಜ್ರ ಪತ್ತೆಯಾಗಿದೆ.ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗ ಒಟ್ಟು 16.10 ಕೋಟಿ ಮೌಲ್ಯದ 22 ಕೆಜಿ 923 ಗ್ರಾಂ ಚಿನ್ನ, 6 ಕೋಟಿ 45 ಲಕ್ಷ ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದ್ದು , 1.33 ಕೋಟಿ ನಗದು ಪತ್ತೆಯಾಗಿದೆ.

Copyright © All rights reserved Newsnap | Newsever by AF themes.
error: Content is protected !!