December 24, 2024

Newsnap Kannada

The World at your finger tips!

akilesh yadav

2022 ರ ಉ.ಪ್ರ ಚುನಾವಣೆ :403ರಲ್ಲಿ 400 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು – ಅಖಿಲೇಶ್ ಯಾದವ್

Spread the love

2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ 400 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಪಕ್ಷದ ರಾಜಕೀಯ‌ ಭವಿಷ್ಯ ಹೇಳಿ, 400 ಕ್ಷೇತ್ರಗಳನ್ನು ಗೆಲ್ಲುವ ತಮ್ಮ ಗುರಿಯನ್ನು ಈ ಬಾರಿ ತಲುಪುತ್ತೇವೆ ಎಂದರು.

ಸಂದರ್ಶನವೊಂದರಲ್ಲಿ ಮಾತನಾಡಿದ ಅಖಿಲೇಶ್ ಸಣ್ಣ ಪಕ್ಷಗಳ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಚಿಂತನೆಯಲ್ಲಿದ್ದೇವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚಿಕ್ಕ ಪಕ್ಷ. ಈ ಮೊದಲು ದೊಡ್ಡ ಪಕ್ಷಗಳ ಜೊತೆ ಮಾಡಿಕೊಂಡಿದ್ದ ಮೈತ್ರಿ ಲಾಭದಾಯಕವಾಗಿರಲಿಲ್ಲ ಎಂದರು.

ಚಿಕ್ಕಪ್ಪ ಶಿವಪಾಲ್ ಅವರಿಗಾಗಿ ಜಸ್ವಂತ್ ನಗರ ಸೀಟ್ ಬಿಟ್ಟುಕೊಡಲಾಗಿದೆ. ಅವರ ಬೆಂಬಲಿಗರಿಗೆ ಎಷ್ಟು ಕ್ಷೇತ್ರ ನೀಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ. ಚುನಾವಣೆ ಪೂರ್ವ ಮೈತ್ರಿ ಬಳಿಕ ಪರಿಸ್ಥಿತಿ ಮತ್ತು ಪಕ್ಷಗಳ ಹೊಂದಾಣಿಕೆ ಮೇಲೆ ಕ್ಷೇತ್ರಗಳನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ವಿರೋಧಿ ಪಕ್ಷವೂ ಇರಬೇಕು ಎನ್ನುವ ಕಾರಣಕ್ಕಾಗಿ
403ರಲ್ಲಿ 400 ಸ್ಥಾನಗಳಲ್ಲಿ ಗೆಲ್ಲೋದು ನಮ್ಮ ಗುರಿ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಇನ್ನುಳಿದ ಮೂರು ಕ್ಷೇತ್ರಗಳನ್ನು ನೀಡುತ್ತೇವೆ ಎಂದರು.

Copyright © All rights reserved Newsnap | Newsever by AF themes.
error: Content is protected !!