ಮಂಡ್ಯ: ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಲಂಚದ ಆರೋಪಗಳು ಮತ್ತೆ ಪುರಸಾಯಿಸಿದ್ದಂತಾಗಿದೆ. ಬಾರ್ ಲೈಸೆನ್ಸ್ ಪಡೆಯಲು ಲಕ್ಷಾಂತರ ಲಂಚವನ್ನು ನೀಡಲು ಒತ್ತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಅರ್ಜಿ ಸಲ್ಲಿಸಿದರೂ ಲಂಚ ನೀಡದೇ ಹೋದರೆ ಅರ್ಜಿ ತಿರಸ್ಕೃತವಾಗುತ್ತಿದೆ ಎಂದು ದೂರಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಅವರು ಮಂಡ್ಯದ ಲೋಕಾಯುಕ್ತ ಕಚೇರಿಗೆ ಅಬಕಾರಿ ಡಿಸಿ ರವಿಶಂಕರ್ ಮತ್ತು ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ ಮತ್ತು ವಿಡಿಯೋ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಸಿಎಲ್ 7 ಬಾರ್ ಲೈಸೆನ್ಸ್ ನೀಡಲು ಈ ಅಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪುನೀತ್ ಅವರ ದೂರಿನ ವಿವರಣೆ:
ನಾನು ಮದ್ದೂರು ತಾಲ್ಲೂಕಿನ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಾರ್ ಲೈಸೆನ್ಸ್ ಪಡೆಯಲು ನನ್ನ ತಾಯಿ ಲಕ್ಷ್ಮಮ್ಮ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದರೂ, ಲಂಚ ನೀಡಲು ನಿರಾಕರಿಸಿದ್ದಕ್ಕೆ ನಾಲ್ಕು ಬಾರಿ ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ.ಇದನ್ನು ಓದಿ –ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
ಅಧಿಕಾರಿಗಳು ಹತ್ತಿರ ಲಂಚ ನೀಡದೇ, ದಾಖಲೆಗಳು ಸರಿಯಾಗಿದ್ದರೂ, ಬಾರ್ ಲೈಸೆನ್ಸ್ ದೊರೆಯದಂತಹ ಸ್ಥಿತಿ ಉಂಟಾಗಿದೆ. ಅಧಿಕಾರಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅರ್ಜಿಗಳನ್ನು ನಿರಾಕರಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪುನೀತ್ ಅವರು ತೀರ್ವ ಖಚಿತತೆ ಹೊಂದಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
More Stories
ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು