December 18, 2024

Newsnap Kannada

The World at your finger tips!

WhatsApp Image 2024 12 14 at 7.29.21 PM

ಸಚ್ಚಿದಾನಂದ ಆಶ್ರಮಕ್ಕೆ ಎರಡು ಗಿನ್ನಿಸ್‌ ದಾಖಲೆ

Spread the love
  • ಸಚ್ಚಿದಾನಂದ ಆಶ್ರಮಕ್ಕೆ ಎರಡು ಗಿನ್ನಿಸ್‌ ದಾಖಲೆ.

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಒಮ್ಮೆಗೆ ಎರಡೆರಡು ಗಿನ್ನಿಸ್ ವಿಶ್ವ ದಾಖಲೆ ಮಾಡಿ ಸಾಂಸ್ಕೃತಿಕ ನಗರಿಗೆ‌ ಹಿರಿಮೆ ಹೆಚ್ಚಿಸಿದೆ.

ಹನುಮಾನ್‌ ಚಾಲೀಸ ಪಾರಾಯಣ ಮತ್ತೊಂದು ವಿಶೇಷ ಅಂಚೆ ಚೀಟಿ ಗಾಗಿ ಎರೆಡು ದಾಖಲೆ ಮಾಡಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ಅಧ್ಯಕ್ಷತೆಯಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ ೬೫೦ಕ್ಕೂ ಹೆಚ್ಚು ಮಂದಿ ಸತತವಾಗಿ ಅಹೋರಾತ್ರಿ ೩೩ಗಂಟೆ ೩೩ನಿಮಿಷ ೩೩ಸೆಕೆಂಡ್ ಹನುಮಾನ್ ಚಾಲೀಸ ಪಾರಾಯಣವನ್ನು ಮಾಡಿದುದು ವಿಶ್ವ ದಾಖಲೆಯಾಗಿದೆ.

ಈ ಪ್ರಯತ್ನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಯು ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿ, ಈ ಸತತ ಪಾರಾಯಣವನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ.


ವಡೋದರದ ಸ್ವಾಮಿ ನಾರಾಯಣ ಭಜನ್ ಯಾಗ, ಪರಮ ಪೂಜ್ಯ ಸದ್ಗುರು ಶ್ರೀ ಜ್ಞಾನಿವಂದಸ್ಜಿ ಸ್ವಾಮಿ–ಕುಂಡಲಧಾಮ ಅವರು ೨೦೨೨ರ ಜು.೨೩ ರಂದು ೨೭ ಗಂಟೆ ೨೭ ನಿಮಿಷ ೨೭ ಸೆಕೆಂಡ್ ಪಾರಾಯಣ ಮಾಡಿ ದಾಖಲೆ ನಿರ್ಮಿಸಿದ್ದರು.

image 12

ನಿನ್ನೆ ನಾದಮಂಟಪದಲ್ಲಿ ಸಂಪನ್ನಗೊಂಡ ಹನುಮಾನ್‌ ಚಾಲೀಸಾ ಪಾರಾಯಣ‌ ಹಿಂದಿನ ಈ ದಾಖಲೆಯನ್ನು ಮೀರಿ ನೂತನ ಗಿನ್ನಿಸ್ ದಾಖಲೆ ಬರೆಯಿತು. ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮತ್ತೊಂದು ದಾಖಲೆಯನ್ನೂ ಇದೇ ವೇಳೆ ಬರೆದಿದೆ. ಇದನ್ನು ಓದಿ –ರೇಣುಕಾ ಸ್ವಾಮಿ ಕೊಲೆ ಪ್ರಕರಣ: ದರ್ಶನ್ ಸೇರಿ 7 ಮಂದಿಗೆ ಜಾಮೀನು ಮಂಜೂರು

ನಾದಮಂಟಪದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಹೊರತಂದಿರುವ ಅಂಚೆ ಚೀಟಿ ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ (೩.೧೨ ಮೀಟರ್‌ – ೪.೨ ಮೀಟರ್‌)ಯಾಗಿದ್ದು ಇದೂ ಕೂಡ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ವಿಶೇಷ.

Copyright © All rights reserved Newsnap | Newsever by AF themes.
error: Content is protected !!