ಎರಡು ದಿನಗಳಲ್ಲಿ‌ ೧೫ ಮಸೂದೆಗಳನ್ನು ಅಂಗೀಕರಿಸಿದ ರಾಜ್ಯಸಭೆ

Team Newsnap
1 Min Read

ರಾಜ್ಯಸಭೆಯಲ್ಲಿ, ಎಂಟು ಜನ ಸಂಸದರನ್ನು ಅಮಾನತು ಮಾಡಿದ ನಂತರ
ಎರಡೂ ಸದನಗಳ ಸದಸ್ಯರು ಅಮಾನತು ಖಂಡಿಸಿ ಪ್ರತಿಭಟನೆ ನಡೆಸುವ ಬೆನ್ನಲ್ಲೇ
ರಾಜ್ಯಸಭೆಯಲ್ಲಿ ೧೫ ಮಸೂದೆಗಳನ್ನು ಅಂಗೀಕಾರ ಮಾಡಲಾಗಿದೆ.

ಈ ಮಸೂದೆಗಳಲ್ಲಿ ಮೂರು ಮಸೂದೆಗಳು ಕಾರ್ಮಿಕ ವಿರೋಧಿಯಾಗಿದೆ. ಅದಕ್ಕೆ ಅನೇಕ ಕಾರ್ಮಿಕ ಸಂಘಟನೆಗಳು ಸೇರಿದಂತೆ ಬಿಜೆಪಿ ಮಿತ್ರ ಸಂಘ ಆರ್.ಎಸ್.ಎಸ್. ಕೂಡ ಈ ಮಸೂದೆಗಳನ್ನು ವಿರೋಧ ಮಾಡಿದೆ.

ಬುಧವಾರ ೭ ಹಾಗೂ ಗುರುವಾರ ೮ ಮಸೂದೆಗಳನ್ನು ರಾಜ್ಯಸಭೆ ಅಂಗೀಕಾರ ಮಾಡಿದೆ. ಸಂಸತ್ ಕಲಾಪವನ್ನು ಅನಿರ್ಧಾಷ್ಟವಧಿಗೆ ಮುಂದೂಡಿದಾಗ ಸಭಾಪತಿಯಾದ ವೆಂಕಯ್ಯ ನಾಯ್ಡು ಅವರು ‘೨೦೧೩ ರಲ್ಲಿ ಸದಸ್ಯರ ಕಲಾಪ ಬಹಿಷ್ಕಾರದ ನಡುವೆಯೂ ಹಣಕಾಸು ಮಸೂದೆ, ವಿನಿಯೋಜನೆ ಮಸೂದೆಗಳನ್ನು ಅಂಗೀಕಾರ ಮಾಡಲಾಗಿತ್ತು. ಪ್ರಸ್ತುತ ಸದಸ್ಯರ ಅಮಾನತು ಸ್ವೀಕಾರಾರ್ಹವಲ್ಲದಿದ್ದರೂ ಅನಿವಾರ್ಯವಾಗಿದೆ. ದೀರ್ಘಕಾಲದವರೆಗಿನ ಅಮಾನತು ಸದಸ್ಯರ ಉನ್ನತ ವಿಚಾರಗಳ ತಿಳಿಯಪಡಿಸುವಿಕೆಯನ್ನು ನಿರ್ಬಂಧಿಸುತ್ತದೆ’ ಎಂದು ಹಳೆಯ ಮಸೂದೆಗಳ ಅಂಗೀಕಾರಗಳನ್ನು ನೆನಪಿಸಿಕೊಂಡರು.

Share This Article
Leave a comment