ಈ ಪ್ರಕರಣದಲ್ಲಿ, PWD ಕಾಂಟ್ರ್ಯಾಕ್ಟರ್ ನವೀನ್ ಜೆ ಅವರಿಗೆ ಮಲೇಷಿಯಾ ಕಂಪನಿಯ ಹೆಸರಿನಲ್ಲಿ ವಿಕ್ಕಿ ಅಹುಜಾ ಎಂಬಾತ ಪರಿಚಯನಾಗಿ, ಹಣ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದ. ನವೀನ್ ಅವರು ಈ ಆಮಿಷವನ್ನು ನಂಬಿ ಹೂಡಿಕೆ ಮಾಡಿದ ಪರಿಣಾಮ, ವಂಚಕರ ಗುಂಪು ಹಂತ ಹಂತವಾಗಿ ಅವರಿಂದ 2 ಕೋಟಿ ರೂಪಾಯಿ ವಂಚಿಸಿದ್ದಾರೆ.
ನಕಲಿ ಕಂಪನಿಯ ಹೆಸರಿನಲ್ಲಿ ಮತ್ತು ಮಧ್ಯವರ್ತಿಗಳ ಮೂಲಕ ಈ ವಂಚನೆ ನಡೆಸಲಾಗಿತ್ತು. ಮೋಸಗೊಳಾದ ನವೀನ್ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ತನಿಖೆ ನಡೆಸಿ, ಶ್ಯಾಮ್ ಥಾಮಸ್, ಜೋಸ್ ಕುರುವಿಲ್ಲ, ಜೀನ್ ಕಮಲ್, ಜಾಫರ್, ವಿಜಯ್ ಚಿಪ್ಲೋಂಕರ್, ಅಮಿತ್ ಮತ್ತು ಊರ್ವಶಿ ಎಂಬ 7 ಆರೋಪಿಗಳನ್ನು ಬಂಧಿಸಿದ್ದಾರೆ. ವಂಚನೆ ನಡೆಸುವ ಗ್ಯಾಂಗ್ ನಕಲಿ ಕಂಪನಿಗಳನ್ನು ತೆರೆದು, ಹೂಡಿಕೆ ಎಂಬ ಹೆಸರಲ್ಲಿ ದೊಡ್ಡ ಮೊತ್ತದ ಹಣವನ್ನು ವಂಚಿಸುತ್ತಿತ್ತು.ಇದನ್ನು ಓದಿ –ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
ಪ್ರಮುಖ ಆರೋಪಿ ವಿಕ್ಕಿ ಅಹುಜಾ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ವಿಕ್ಕಿ ಅಹುಜಾಗಾಗಿ ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು