‘ವನ್ಯಜೀವಿ ಉತ್ಪನ್ನ’ ಹಿಂತಿರುಗಿಸಲು 2-3 ತಿಂಗಳು ಡೆಡ್ ಲೈನ್ ? ಶೀಘ್ರ ಸರ್ಕಾರದ ನಿರ್ಧಾರ : ಸಚಿವ ಖಂಡ್ರೆ

Team Newsnap
1 Min Read

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿಸಿ, ಬಿಡುಗಡೆ ಆದ ನಂತರ, ಈಗ ವನ್ಯಜೀವಿ ಉತ್ಪನ್ನಗಳನ್ನು ಹೊಂದಿರುವವರಿಗೆ ಬಿಗ್ ರಿಲೀಪ್

ವನ್ಯಜೀವಿ ಉತ್ಪನ್ನ ಇಟ್ಟುಕೊಂಡಿರುವ ವ್ಯಕ್ತಿಗಳು 2 ರಿಂದ 3 ತಿಂಗಳೊಳಗೆ ಹಿಂದಿರುಗಿಸಲು ರಾಜ್ಯ ಸರ್ಕಾರ ಡೆಡ್ ಲೈನ್ ನೀಡಿದೆ.

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ವನ್ಯಜೀವಿಗಳ ಹಲ್ಲು, ಉಗುರು, ಅಂಗಾಂಗ, ಚರ್ಮ ಹಾಗೂ ಕೊಂಬು ಇಟ್ಟುಕೊಂಡವರು 2 ರಿಂದ 3 ತಿಂಗಳಲ್ಲಿ ವಾಪಸ್ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದರು.

ಈಗಾಗಲೇ ಎಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿಸಿ, ಡೆಲ್ ಲೈನ್ ನೀಡುವ ಬಗ್ಗೆ ಕರಡು ಪ್ರತಿ ರೆಡಿ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಶೀಘ್ರವೇ ಸರ್ಕಾರದಿಂದ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ರಾಜ್ಯದ ಅನೇಕರು ವನ್ಯಜೀವಿ ಉತ್ಪನ್ನಗಳನ್ನು ಕಾನೂನು ಅರಿವು ಇಲ್ಲದೇ ಇಟ್ಟುಕೊಂಡಿದ್ದಾರೆ. ಅಂತಹ ವಸ್ತುಗಳನ್ನು ವಾಪಾಸ್ಸು ಕೊಡೋದಕ್ಕೆ ಸಿಎಂ ಜೊತೆಗೆ ಚರ್ಚೆ ನಡೆಸಲಾಗುತ್ತದೆ.
ನವೆಂಬರ್.9ರಂದು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಜಾರಿಗೆ ತರುವುದಾಗಿ ತಿಳಿಸಿದರು.

Share This Article
Leave a comment