ದಾವಣಗೆರೆ: ಚನ್ನಗಿರಿ ಮತ್ತು ಸಂತೆಬೆನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಅಡಿಕೆ ವ್ಯಾಪಾರಿಗನ್ನು ಬೆದರಿಸಿ 17.24 ಲಕ್ಷ ರೂ. ದರೋಡೆ ಮಾಡಿದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚನ್ನಗಿರಿಯ ಮಹಮ್ಮದ್ ಇನಾಯತ್ (21), ಉಮ್ಮರ್ ಫಾರೂಕ್ (21), ಶಾಹಿದ್ ಖಾಜಿ (24), ಮೈಸೂರ ನಿವಾಸಿಗಳಾದ ಖುರಂ ಖಾನ್ (25), ಸೈಯದ್ ಸೈಫುಲ್ಲಾ (24), ಖಾಷಿಫ್ ಅಹಮದ್ (25), ಮತ್ತು ತುಮಕೂರು ನಿವಾಸಿ ಖುರಂ ಖಾನ್ (25) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 30 ರಂದು, ಚನ್ನಗಿರಿಯ ಜೋಳದಾಳ ಬಳಿ ಅಡಿಕೆ ವ್ಯಾಪಾರಿ ಅಶೋಕ್ ಅವರನ್ನು ಅಡ್ಡಗಟ್ಟಿ, ಚಾಕುವಿನ ಬೆದರಿಕೆಯ ಮೂಲಕ 17.24 ಲಕ್ಷ ರೂ. ದರೋಡೆ ಮಾಡಿ, ನಂತರ ವಾಹನದ ಕೀ ಕಸಿದುಕೊಂಡು ಪರಾರಿಯಾಗಿದ್ದರು.
ಅಡಿಕೆ ಕೊಡಿಸುವ ಮಧ್ಯಸ್ಥಿಕೆಯಲ್ಲಿ ತೊಡಗಿದ್ದ ಮಹಮ್ಮದ್ ಇನಾಯತುಲ್ಲಾ ಎಂಬಾತನ ಮೇಲೆ ತೀವ್ರ ವಿಚಾರಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.ಇದನ್ನು ಓದಿ –ಈ ವರ್ಷ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಪೊಲೀಸರು ಆರೋಪಿಗಳಿಂದ 7.37 ಲಕ್ಷ ರೂ. ನಗದು, 2 ಕಾರು, 2 ಬೈಕ್, ಮತ್ತು 9 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ