April 18, 2025

Newsnap Kannada

The World at your finger tips!

vasantavallabaraya

1500 ವರ್ಷ ಪುರಾತನ ದೇವಾಲಯ ವಸಂತವಲ್ಲಭರಾಯ ಸ್ವಾಮಿ

Spread the love

ಪುರಾಣ ಪ್ರಸಿದ್ಧ ಕ್ಷೇತ್ರಗಳು ಕರ್ನಾಟಕದಲ್ಲಿ ಬಹಳಷ್ಟೇ ಇವೆ ಅಂತಹದರಲ್ಲಿ ಮಾಂಡವ್ಯ ಋಷಿಗೆ ಸಿಕ್ಕ ಸ್ವಯಂಭೂ ವಸಂತವಲ್ಲಭರಾಯ ಸ್ವಾಮಿಯು ಬೆಂಗಳೂರು ನಗರದ ವಸಂತಪುರದಲ್ಲಿ ಇರುವುದು ವಿಶೇಷ ಚೋಳ ಸಮಯದಲ್ಲಿ ವಿಜಯನಗರದ ಅರಸರಿಂದ ನಿರ್ಮಿತವಾದ ದೇವಾಲಯವೆಂದು 1500 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಮಾಂಡವ್ಯ ಋಷಿಗಳು ಇದ್ದ ಸ್ಥಳವೆಂದು ಸ್ಥಳ ಪುರಾಣದಲ್ಲಿ ಹೇಳಲಾಗುತ್ತದೆ.

ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಬಳಿ ಇರುವ ಪುಷ್ಕರಿಣಿಯಲ್ಲಿ ತಿರುಪತಿಯಲ್ಲಿ ಮದುವೆಯಾದ ನಂತರ ಮಂಗಳ ಸ್ನಾನ ಮಾಡಿದ ತೀರ್ಥಗಳೆಂದು ಪ್ರಸಿದ್ಧವಾಗಿದ್ದ ಐದು ತೀರ್ಥಗಳಲ್ಲಿ ಎರಡು ತೀರ್ಥಗಳು ಮಾತ್ರ ಉಳಿದಿವೆ ಇಲ್ಲಿ ಸ್ನಾನ ಮಾಡಿದರೇ ಮಂಗಳಕರ ಎಂಬ ಪ್ರತಿತಿ ಇದೆ. ದೇವ ತೀರ್ಥ ಮತ್ತು ವಸಂತ ತೀರ್ಥಗಳೇ ಈ ತೀರ್ಥಗಳು ಇವನ್ನ ಬಿಟ್ಟು ಇನ್ನು ಮೂರಿದ್ದ ಶಂಖತೀರ್ಥ, ಪ್ಲವತೀರ್ಥ ಮತ್ತು ಚಕ್ರತೀರ್ಥಗಳು ಇಂದಿನ ಕಾಲದಲ್ಲಿ ಬತ್ತಿ ಹೋಗಿದೆ. ಮಾಂಡವ್ಯ ಋಷಿಗಳ ತಪೋ ಭೂಮಿ ಮತ್ತು ಅವರು ತಪಸ್ಸನ್ನು ಆಚರಿಸಿ ಸ್ವಾಮಿಯನ್ನು ಒಲಿಸಿಕೊಂಡು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆಂದು ವೆಂಕಟರಮಣನ ವಿವಾಹಕ್ಕೆ ತಿರುಪತಿಗೆ ಹೋಗಲು ಆಗದ ಕಾರಣ ಇಲ್ಲಿಯೇ ವರಿಗೆ ದರ್ಶನ ನೀಡಿ ನೆಲೆಸಿದ್ದಾನೆಂದು ಕೂಡ ಹೇಳಲಾಗುತ್ತದೆ.

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದ ಜನರಿಗೆ ವಸಂತ ವಲ್ಲಭರಾಯ ಸ್ವಾಮಿ ದೇವಾಲಯವು ತೀರ್ಥಕ್ಷೇತ್ರದಂತೆ ಪವಿತ್ರವಾಗಿದ್ದು ತಿರುಪತಿ ವೆಂಕಟರಣನಂತೆಯೇ ಪೂಜಿಸುತ್ತಾರೆ. ವಿಷ್ಣುವಿನ ವಸಂತ ರೂಪದ ಪೂಜೆ ನಡೆಯುವುದರಿಂದ ಈ ಕ್ಷೇತ್ರದ ಸ್ವಾಮಿ ವಸಂತ ವಲ್ಲಭರಾಯ ಸ್ವಾಮಿಯಾಗಿದ್ದಾನೆ. ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ಪೂಜೆಗೊಳ್ಳುವ ಸ್ವಾಮಿಗೆ ಮುಂಜಾನೆಯಿಂದ ಹಿಡಿದು ಎಲ್ಲ ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ದಿನ ನಿತ್ಯವೂ ಆಗುತ್ತದೆ. ತಿರುಪತಿಯಲ್ಲಿ ನಡೆಯುವ ಸುಪ್ರಭಾತ ಸೇವೆಯಿಂದ ಹಿಡಿದು ಅರಚನೆ ಅಭಿಷೇಕ ಎಲ್ಲವನ್ನೂ ದಿನದ ಕೊನೆಯ ಏಕಾಂತ ಸೇವೆಯವರೆಗೂ ವೆಂಕಟರಮಣನಿಗೆ ಭೂ ವೈಕುಂಠದಲ್ಲಿ ಮಾಡುವ ರೀತಿಯಲ್ಲಿಯೇ ಮಾಡುತ್ತಾರೆ. ಇಲ್ಲಿ ಗುರುವಾರ ಮತ್ತು ಶನಿವಾರಗಳಂದು, ನವರಾತ್ರಿಯ ಸಮಯದಲ್ಲಿ ಕೂಡ ವಿಶೇಷ ಪೂಜೆ ನಡೆಯುತ್ತದೆ ಮತ್ತು ಮಾಘ ಮಾಸದಲ್ಲಿ ನಡೆಯುವ ರಥೋತ್ಸವವು ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ. ಮಾಘ ಮಾಸದ ಮಘ ನಕ್ಷತ್ರವಿದ್ದರೆ ಅಂದು ಮಘ ನಕ್ಷತ್ರ ಮತ್ತು ದ್ವಿತೀಯಾ ತಿಥಿ ಇದ್ದರೆ ಅಂತಹ ದಿನಗಳಲ್ಲಿ ನಡೆಯುವ ರಥೋತ್ಸವವು ಬಹಳ ಪ್ರಮುಖ ಉತ್ಸವಗಳಾಗಿವೆ.

ವಸಂತ ವಲ್ಲಭರಾಯ ಸ್ವಾಮಿ ದೇವಾಲಯದಲ್ಲಿ ಭಕ್ತಿಯಿಂದ ಪೂಜಿಸಿದರೆ ವಿವಾಹವಾಗದವರಿಗೆ ವಿವಾಹವಾಗುವುದು ಸಂತಾನ ಇಲ್ಲದವರಿಗೆ ಸಂತಾನ ದೊರೆಯುವುದು ಎಂಬುದು ಭಕ್ತರ ನಂಬಿಕೆಯಾಗಿದೆ. ಸ್ವಾಮಿಯು ವಿವಾಹದ ನಂತರ ಮಾಂಡವ್ಯ ಋಷಿಗಳಿಗೆ ದರ್ಶನ ನೀಡಿದ ಕಾರಣ ಅವರ ತಪೋ ಭೂಮಿಯಾದ ಕಾರಣ ಈ ಕ್ಷೇತ್ರ ಇನ್ನೂ ಪವಿತ್ರವೆನಿಸಿದೆ. ವಸಂತ ವಲ್ಲಭರಾಯ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಭಕ್ತರಿಗೆ ಶಾಂತಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಿಕೆಬಿಕೆ ಇದೆ.ಇದನ್ನು ಓದಿ –ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ

ಬೆಂಗಳೂರಿನ ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದಿಂದ 11 ಕಿಲೋಮೀಟರ್ಗಳಾಗುತ್ತವೆ. ಮಾರುಕಟ್ಟೆಯಿಂದ ಕೂಡ ಬೇಕಾದಷ್ಟು ಬಸ್ ಸೌಲಭ್ಯಗಳು ಇವೆ. ನೇರ ಬಸ್ ಸಿಗದೇ ಇದ್ದರೇ ಬನಶಂಕರಿಯಿಂದ ಸಾಕಷ್ಟು ಬಸ್ ದೊರೆಯುತ್ತದೆ. ಇದರ ಜೊತೆಗೆ ಈಗ ಮೆಟ್ರೊ ಹಸಿರು ಪಟ್ಟಿಯಲ್ಲಿ ಕೂಡ ಇಲ್ಲಿ ತಲುಪಬಹುದಾಗಿದೆ. ಕೋಣನಕುಂಟೆ ಕ್ರಾಸ್ನಲ್ಲಿ ಇಳಿದು ಕೆಂಗೇರಿ ಕಡೆಗೆ ಹೋಗುವ ಬಸ್ನಲ್ಲಿ 3 ನಿಲ್ದಾಣಗಳನ್ನು ದಾಟಿದರೆ ಈ ದೇವಾಲಯವನ್ನು ತಲುಪಬಹುದು.ಈ ಬಾರೀ ರಥೋತ್ಸವವು ಫೆಬ್ರವರಿ 13ರಂದು ಮಘ ನಕ್ಷತ್ರದಲ್ಲಿ ನಡೆಯಲಿದೆ. ಈ ಉತ್ಸವಕ್ಕೆ ಸುತ್ತಮುತ್ತಲಿನ ಹಲವು ಊರಿನ ಭಕ್ತರು ತಪ್ಪದೇ ಬರುತ್ತಾರೆ.

madhuri deshpande

ಮಾಧುರಿ ದೇಶಪಾಂಡೆ, ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!