January 29, 2026

Newsnap Kannada

The World at your finger tips!

WhatsApp Image 2021 11 13 at 1.28.18 PM

ದಾವಣಗೆರೆಯಲ್ಲಿ ಮದ್ವೆ ಊಟ ಸೇವಿಸಿ 150 ಮಂದಿ ಅಸ್ವಸ್ಥ

Spread the love

ಮದುವೆ ಊಟ ಸೇವಿಸಿ 150ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ದಾವಣಗೆರೆ ಹೊನ್ನಾಳಿ ತಾಲೂಕಿನ ಹಳೆ ದೇವರಹೊನ್ನಾಳಿ ಗ್ರಾಮದಲ್ಲಿ ಜರುಗಿದೆ

ಚಂದ್ರಪ್ಪ ಎಂಬುವವರ ಮನೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡಿದ್ದ ನೂರಾರು ಮಂದಿ ಮಧ್ಯರಾತ್ರಿ ಅಸ್ವಸ್ಥರಾಗಿದ್ದಾರೆ.

ಮದ್ಯರಾತ್ರಿ ವೇಳೆಗೆ ಊಟ ಮಾಡಿದವರಲ್ಲಿ ವಾಂತಿ ಬೇಧಿ ಶುರುವಾಗಿದೆ. 10 ಮಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ತೀವ್ರವಾಗಿ ಅಸ್ವಸ್ಥಗೊಂಡ ಮೂವರನ್ನು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ 150 ಜನರ ಪೈಕಿ ಕೆಲವರು ಚೇತರಿಸಿಕೊಳ್ಳುತ್ತಿದ್ದು ಹಲವರಿಗೆ ಚಿಕಿತ್ಸೆ ಮುಂದುವರೆದಿದೆ. ಹೆಚ್ಚಿನ ಆರೈಕೆಗಾಗಿ ಆರೋಗ್ಯ ಇಲಾಖೆ ಗ್ರಾಮದಲ್ಲಿ ತಾತ್ಕಾಲಿಕ ಹೆಲ್ತ್​​ ಕ್ಯಾಂಪ್​ ತೆರೆದಿದೆ.

ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!