December 31, 2024

Newsnap Kannada

The World at your finger tips!

mysore , Karnataka , minister

15 ವರ್ಷಗಳ ಹಳೆಯದಾದ ವಾಹನಗಳು ಸ್ಕ್ವ್ಯಾಷ್‌ – ನೀತಿ ಜಾರಿಗೆ ಕೇಂದ್ರ ಕ್ಕೆ ಪ್ರಸ್ತಾಪವನೆ – ಗಡ್ಕರಿ

Spread the love

15 ವರ್ಷ ಹಳೆಯ ವಾಹನಗಳನ್ನು ಬಳಕೆ ಮಾಡದಂತೆ ಮಾಡುವ ಬಹು ನಿರೀಕ್ಷಿತ ನೀತಿಗೆ ಸದ್ಯದಲ್ಲೇ ಸರ್ಕಾರದ ಆದೇಶ ದೊರೆಯಲಿದೆ

ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತಂತೆ ಹೇಳಿಕೆ ನೀಡಿ, ವಿದ್ಯುತ್ ವಾಹನಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

15 ವರ್ಷ ಬಳಕೆ ಮಾಡಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿಸಲಾಗಿದೆ. 2019 ರ ಜುಲೈ 26 ರಂದು ಸರ್ಕಾರವು ಮೋಟಾರು ವಾಹನಗಳ ಮಾನದಂಡಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಈ ರದ್ದಿ ನೀತಿಗೆ ಆದಷ್ಟು ಬೇಗ ಅನುಮೋದನೆ ಯನ್ನು ಪಡೆಯಬಹುದೆಂದು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!