ಗೋಮಾತೆಯನ್ನು ಅಪ್ಪಿಕೊಂಡರೆ ಮಾನಸಿಕ ನೆಮ್ಮದಿ, ಬಿ ಪಿ, ಷುಗರ್ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಎಂದು ಭಾವಿಸಿರುವ ಅಮೆರಿಕಾದ ಜನರು ಈಗ ಹಸುಗಳನ್ನು ಅಪ್ಪಿಕೊಳ್ಳುವ ಟ್ರೆಂಡ್ ಗೆ ದಾಸರಾಗಿದ್ದಾರೆ.
ಇದರ ಹೆಸರೇ ‘Cow Hugging’ ಅಂತ. ಒಂದು ಗಂಟೆಗೆ 200 ಡಾಲರ್ (ಸುಮಾರು 15 ಸಾವಿರ ರು) ಗಳನ್ನು ನೀಡಿ ಜನರು ಈ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ.
ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್ಗಳನ್ನೇ ತೆರೆದು ಉದ್ಯಮವನ್ನು ಆರಂಭಿಸಿದ್ದಾರೆ. ಅಲ್ಲದೇ ಹಲವು ಕಡೆ ಜುಲೈವರೆಗೂ ಬುಕಿಂಗ್ ಕೂಡ ಪೂರ್ಣಗೊಂಡಿದೆ ಅಂತೆ.
ಅರಿಜೋನಾದ ಐದು ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸ್ಯಾಂಚುರಿಯಲ್ಲಿ ಹಸುಗಳನ್ನು ಅಪ್ಪಿಕೊಳ್ಳುವ ಅಭಿಯಾನವನ್ನೇ ನಡೆಸಲಾಗುತ್ತಿದೆ. ಅಲ್ಲಿನ ಸಿಬ್ಬಂದಿ ಮಾಹಿತಿಯಂತೆ ನಮ್ಮ ಹಸುಗಳನ್ನು ಅಪ್ಪಿಕೊಳ್ಳಲು ವಿಶ್ವದ ಹಲವು ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ. ಹಸುಗಳು ನಿಮ್ಮ ಮನದಲ್ಲಿ ಉಲ್ಲಾಸದ ಭಾವನೆಯನ್ನು ಮೂಡಿಸಲು ಸಹಕಾರಿ ಆಗಲಿದೆ. ಇದರಿಂದ ಅನೇಕ ಸಮಸ್ಯೆಗಳು ನಿವಾರಣೆ ಆಗಲಿದೆ.
ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ಇದು ನೆರವಾಗುತ್ತದೆ ಎಂಬುದು ಅವರುಗಳ ಅಭಿಪ್ರಾಯ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ