November 15, 2024

Newsnap Kannada

The World at your finger tips!

maharastra cm

ಮಹಾರಾಷ್ಟ್ರ ದಲ್ಲಿ ಇಂದಿನಿಂದ‌ 15 ದಿನ‌ ಜನತಾ ಕಫ್ಯೂ ೯ – ಬಡವರಿಗೆ 3 ತಿಂಗಳು ಉಚಿತ ರೇಷನ್ – ಧನ ಸಹಾಯ

Spread the love

ಕೊರೊನಾ ಹರಡುವಿಕೆ ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ 15 ದಿನ ಜನತಾ ಕರ್ಫ್ಯೂ ಜಾರಿ ಮಾಡಿದೆ.

ಇಂದು ರಾತ್ರಿ 8 ಗಂಟೆಯಿಂದ ಏಪ್ರಿಲ್ 30ರವರೆಗೆ ಜನತಾ ಕಫ್ರ್ಯೂ ಜಾರಿಯಾಗಲಿದೆ. ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಾಗಲಿದೆ. ಇದು ಲಾಕ್‍ಡೌನ್ ಅಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಭಾರೀ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ, 4ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಜನರು ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ

ಬಡವರ ಸಹಾಯಕ್ಕೆ ಬಂದ ಮಾಹಾ ಸರ್ಕಾರ:

ಈ ಕಠಿಣ ನಿರ್ಧಾರ ದಿಂದ ಶ್ರೀಸಾಮಾನ್ಯರು, ಬಡವರಿಗೆ ತೊಂದರೆ ಆಗದಿರುಲು ಮಹಾ ಸರ್ಕಾರ ಭಾರಿ ನೆರವು ಘೋಷಿಸಿದೆ.

ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರ ಖಾತೆಗೆ ನಗದು ಪರಿಹಾರ ನೀಡಲು ಮುಂದಾಗಿದೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರದ ಜೊತೆ ‘ಶಿವ’ ಭೋಜನ್ ಆರಂಭಿಸಲು ಮುಂದಾಗಿದೆ. ಇದರ ಜೊತೆಗೆ ಆಟೋ ಚಾಲಕರು, ಕೂಲಿ ಕಾರ್ಮಿಕರ ನರೆವಿಗೂ ಸರ್ಕಾರ ಧಾವಿಸಿದೆ.

ನೆರವು: ಎಷ್ಟು? ಯಾರಿಗೆ ?

ಕೂಲಿ ಕಾರ್ಮಿಕರು, ಮನೆ ಕೆಲಸದವರ ಖಾತೆಗೆ 1,500 ರೂ. ಜಮೆ ಆಗಲಿದೆ. ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಖಾತೆಗೆ 1500 ರೂ. ಸಿಗಲಿದೆ. ಪ್ರತಿ ಬಡ ಕುಟುಂಬಕ್ಕೂ 3 ಕೆಜಿ ಗೋಧಿ, 2 ಕೆಜಿ ಅಕ್ಕಿ ಸಿಗಲಿದೆ. ಶಿವ ಭೋಜನ್ ಅಡಿಯಲ್ಲಿ ಎಲ್ಲರಿಗೂ ಉಚಿತ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಜಿಎಸ್‍ಟಿ ಪಾವತಿಗೆ 3 ತಿಂಗಳು ಕಾಲವಕಾಶ ನೀಡಲಾಗಿದೆ.

ತುರ್ತು ಸಂದರ್ಭ ಹೊರತು ಪಡಿಸಿ ಅನಗತ್ಯ ಪ್ರಯಾಣವನ್ನು ಕೈಗೊಳ್ಳುವಂತಿಲ್ಲ. ಅಗತ್ಯ ವಸ್ತುಗಳ ಅಂಗಡಿ, ಮೆಡಿಕಲ್, ಬ್ಯಾಂಕು, ಮಾಧ್ಯಮ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳು ಲಭ್ಯವಿರುತ್ತದೆ. ರಾತ್ರಿ 8ರ ಬಳಿಕ ಅಂಗಡಿಗಳನ್ನು ಮುಚ್ಚಬೇಕು ಎಂದು ಮುಖ್ಯ ಮಂತ್ರಿ ಉದ್ದವ್ ಠಾಕ್ರೆ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!