January 9, 2025

Newsnap Kannada

The World at your finger tips!

road,highway,access

Talk about access to bikes on the Bangalore-Mysore Express Highway - Prathap Simha

15 ದಿನ ಬೆಂಗಳೂರು ಲಾಕ್‍ಡೌನ್ ಮಾಡಿ – ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು ತಜ್ಞರ ಆತಂಕ

Spread the love

ಮುಂದಿನ‌ 15 ದಿನಗಳ ಕಾಲ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿ.

  • ಇದು ಸರ್ಕಾರಕ್ಕೆ ತಜ್ಞರು ನೀಡಿರುವ ಮಹತ್ವದ ಸಲಹೆ. ವೀಕೆಂಡ್ ಲಾಕ್‍ಡೌನ್ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಆದರೆ ಎರಡು ವಾರ ಲಾಕ್‍ಡೌನ್ ಮಾಡದೆ ಹೋದರೆ ಕೊರೊನಾ ನಿಯಂತ್ರಣ ಅಸಾಧ್ಯ. ಕೊರೊನಾ ಕ್ಷಣ ಕ್ಷಣಕ್ಕೂ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ವೀಕೆಂಡ್ ಲಾಕ್ ಮಾಡಿ ಇನ್ನುಳಿದ ದಿನಗಳನ್ನು ಫ್ರೀ ಆಗಿ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಙರು ಎಚ್ಚರಿಕೆ ನೀಡಿದ್ದಾರೆ ಅವಶ್ಯಕತೆ ಇದ್ದರೆ ಲಾಕ್‍ಡೌನ್ ಮಾಡಬಹುದು ಎಂದು ಪ್ರಧಾನಿಗಳು ಹೇಳಿದ್ದಾರೆ. ಸದ್ಯ ಬೆಂಗಳೂರಿಗೆ ಲಾಕ್‍ಡೌನ್ ಅತ್ಯವಶ್ಯಕವಾಗಿದೆ. ಸರ್ಕಾರ ತಡಮಾಡದೇ ವಾರಂತ್ಯದ ಲಾಕ್‍ಡೌನ್ ವಾರದ ದಿನಗಳಲ್ಲಿ ಮುಂದುವರಿಸಬೇಕೆಂದು ತಜ್ಞರ ತಂಡ ಒತ್ತಾಯಿಸಿದೆ.

ಗಂಟೆಗೆ 700 ಜನಕ್ಕೆ ಕೊರೊನಾ:
ಪ್ರತಿ ಒಂದು ಗಂಟೆಗೆ ಅಂದಾಜು 700 ಜನಕ್ಕೆ ಕೊರೊನಾ ಸೋಂಕು ದೃಢವಾಗುತ್ತಿದೆ.

ಮಾರ್ಚ್ ನಲ್ಲಿ 42 ಜನರಿಗೆ ಪ್ರತಿ ಗಂಟೆಗೊಮ್ಮೆ ಪಾಸಿಟಿವ್ ಬರುತ್ತಿತ್ತು. ಈಗ ಈ ಸಂಖ್ಯೆ ವೇಗವಾಗಿ ಸಾಗುತ್ತಿದೆ. ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಕನಿಷ್ಠ 10 ಜನರು ಜನರು ಇರ್ತಾರೆ. ಈ ವೇಗ ಹೀಗೆ ಮುಂದುವರಿದರೆ ಕೊರೊನಾ ಇಡೀ ಬೆಂಗಳೂರು ನಗರವನ್ನು ವ್ಯಾಪಿಸಿಕೊಳ್ಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!