January 30, 2026

Newsnap Kannada

The World at your finger tips!

BALCHANDRA

15 ಕೋಟಿ ರು ಖಚು೯ ಮಾಡಿದ್ದಾರೆ: ಯುವತಿಗೆ 50 ಲಕ್ಷ ರು ಆಮಿಷ – ಬಾಲಚಂದ್ರ

Spread the love

ಈ ವಿಡಿಯೋ ಪ್ರಕರಣದಲ್ಲಿ ಆಕೆ ಸಂತ್ರಸ್ತ ಯುವತಿ ಎನ್ನಬೇಡಿ.. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ದಿನೇಶ್ ಕಲ್ಲಹಳ್ಳಿ ಪ್ರೆಸ್​ ಮೀಟ್ ಮಾಡೋ ಮೊದಲೇ 17 ಸರ್ವರ್​ಗಳ ಮೂಲಕ 10 ರಿಂದ 15 ಕೋಟಿ ಖರ್ಚು ಮಾಡಿ ರಷ್ಯಾದಿಂದ ಅಪ್ಲೋಡ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಟೀಮ್ ಆಗಿ ವರ್ಕ್ ಮಾಡಿದ್ದಾರೆ. ಒಬ್ಬ ಮಹಿಳೆ ಹಿಂದೆ ನಾಲ್ವರ ಟೀಮ್ ಇದೆ. ಇದರ ಉದ್ದೇಶ ರಮೇಶ್ ಜಾರಕಿಹೊಳಿ ಕುಟುಂಬದ ಮರ್ಯಾದೆ ಕಳೆಯುವುದು, ಮಂತ್ರಿ ಸ್ಥಾನದಿಂದ ಇಳಿಸುವುದಾಗಿತ್ತು ಎಂದು ಶಾಸಕ, ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗೋಷ್ಠಿ ಮಾತನಾಡಿದ ಬಾಲಚಂದ್ರ ನಾನು ರಮೇಶ್ ಜಾರಕಿಹೊಳಿ ಮನೆಗೆ ತೆರಳಿ ಮನವಿ ಮಾಡ್ತೇನೆ. ಮನೆಯಿಂದ ಹೊರಬಂದು ಕಂಪ್ಲೇಂಟ್ ಕೊಡಿ.. ಸುದ್ದಿಗೋಷ್ಟಿ ನಡೆಸಿ.. ಇಲ್ಲವಾದರೆ ನಮಗೆ ಹೇಳಿ ನಾವೇ ಕಂಪ್ಲೇಂಟ್ ಕೊಡ್ತೇವೆ ಎಂದು ಕೇಳುತ್ತೇನೆ. ನಮಗೆ ಗೊತ್ತಿರುವ ಮಾಹಿತಿ ಪ್ರಕಾರ ಆ ಮಹಿಳೆಯನ್ನು ಮುಂದಿಟ್ಟುಕೊಂಡು ಷಡ್ಯಂತ್ರ ನಡೆಸಿದ್ದಾರೆ. ಆಕೆಗೆ ಏನಾದರೂ ತೊಂದರೆಯಾದರೆ ಏನು ಮಾಡೋದು ಎಂದು ಕೇಳಿದಾಗ ₹50 ಲಕ್ಷ ದುಡ್ಡು, ದುಬೈನಲ್ಲಿ ಕೆಲಸ ಕೊಡಿಸ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಢಿಯ ಪ್ರಮುಖ ಅಂಶಗಳು:

  • ನಮಗೆ ಅಧಿಕಾರ ಮುಖ್ಯವಲ್ಲ. ಮರ್ಯಾದೆ, ಗೌರವ ಮುಖ್ಯ. ಬಜೆಟ್ ನಂತರ ನಾವೂ ತನಿಖೆ ಮುಂದುವರಿಸುತ್ತೇವೆ. 15 ಕೋಟಿ ಖರ್ಚು ಮಾಡಿ ರಮೇಶ್ ವಿರುದ್ಧ ಷಡ್ಯಂತ್ರ ಮಾಡಿ ಇದನ್ನ ಮಾಡಿದ್ದಾರೆ.
  • ಹನಿಟ್ರ್ಯಾಪ್ ಮಾರ್ಗದಲ್ಲೇ ಕೇಸ್ ಸಾಗ್ತಾ ಇದೆ. ಐದು ರಾಜ್ಯಗಳಲ್ಲಿ ಚುನಾವಣೆ ಇದೆ. ಪಕ್ಷಕ್ಕೆ ಹಿನ್ನಡೆಯಾಗಲಿ ಅಂತ ಹೀಗೆ ಮಾಡಿದ್ದಾರೆ. ಇಬ್ಬರು.. ನಾಲ್ಕು.. ಮೂರು.. ಹೀಗೆ ಗುಂಪುಗಳಾಗಿ ಷಡ್ಯಂತ್ರ ಮಾಡಿದ್ದಾರೆ. ಇಬ್ಬರು ಈ ಕುರಿತು ಪ್ಲಾನ್ ಮಾಡಿದ್ದಾರೆ. ಇಬ್ಬರು ಸಿಕ್ರೆ ನಾಲ್ಕು ಜನ ಸಿಕ್ತಾರೆ ಅವರಿಂದ ಉಳಿದ ಮೂವರು ಸಿಗುತ್ತಾರೆ.
  • ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಅವರ ಉದ್ದೇಶ ಸಫಲವಾಗಿದೆ. ಜನರಿಗೆ ತನಿಖೆ ಮೂಲಕ ಸತ್ಯ ಗೊತ್ತಾಗಲಿದೆ. ನಾಳೆ ಕೇಸ್ ಯಾವ ಕಡೆ ತಿರುಗುತ್ತೋ ಗೊತ್ತಿಲ್ಲ. ನೋಡಿಕೊಂಡು ನಿರ್ಧಾರ ತೆಗೆದುಕೊಳ್ತೇವೆ.. ಈ ವಿಡಿಯೋ ಲ್ಯಾಬ್​ಗೂ ಹೋಗಬೇಕು ಟೆಸ್ಟ್ ನಡೆಯಬೇಕು ಆಗಷ್ಟೇ ಸತ್ಯ ಗೊತ್ತಾಗಲಿದೆ.
error: Content is protected !!