February 21, 2026

Newsnap Kannada

The World at your finger tips!

d c manjunath

ಕಂಠೀರವ ಸುತ್ತ 144 ಜಾರಿ: ಮಂಗಳವಾರದ ನಂತರ ಸಾರ್ವಜನಿಕರಿಗೆ ಅವಕಾಶ

Spread the love

ಪುನೀತ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋ ಸುತ್ತಮುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗುವುದು, ಇನ್ನೂ ಎರಡು ದಿನ ಸ್ಟುಡಿಯೋ ಒಳಗೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು

ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಜ್​​ಕುಮಾರ್ ಅವರ ಕುಟುಂಬಸ್ಥರು ಅವರ ಸಂಪ್ರದಾಯವನ್ನು ಮುಂದುವರೆಸಬೇಕಿದೆ. ಕುಟುಂಬದವರು ಐದನೇ ದಿನ ಹಾಲು ತುಪ್ಪ ಬಿಡುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಂಠೀರವ ಸ್ಟುಡಿಯೋ ಜಾಗ ತುಂಬಾ ಚಿಕ್ಕದಾಗಿದೆ. ದರ್ಶನ ಪಡೆಯುವ ಎಲ್ಲಾ ವ್ಯವಸ್ಥೆಯನ್ನು ಅಭಿಮಾನಿಗಳಿಗೆ ಮಾಡುತ್ತೇವೆ. ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ, ಬಿಬಿಎಂಪಿ, ಪೊಲೀಸ್​ ಇಲಾಖೆ ಅಧಿಕಾರಿಗಳು ವ್ಯವಸ್ಥಿತವಾಗಿ ಸರ್ಕಾರದ ಸೂಚನೆ ಮೇರೆಗೆ ಕಾರ್ಯ  ನಿರ್ವಹಿಸಿದ್ದಾರೆ. ಅಂತಿಮ ದರ್ಶನಕ್ಕೆ ಎಷ್ಟು ಲಕ್ಷ ಜನ ಬಂದಿದ್ದರು ಎನ್ನುವ ಸರಿಯಾದ ಮಾಹಿತಿ ಇಲ್ಲ ಎಂದರು.

error: Content is protected !!