ಮೈಸೂರು: 2020 ರಿಂದ 2024ರ ನಡುವೆ 50:50 ಅನುಪಾತದಲ್ಲಿ ಹಂಚಿಕೆಗೊಂಡ 1,400ಕ್ಕೂ ಹೆಚ್ಚು ನಿವೇಶನಗಳನ್ನು ಜಪ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “2020-2024 ರ ಅವಧಿಯಲ್ಲಿ 50:50 ಅನುಪಾತದಲ್ಲಿ ನೀಡಿರುವ ಎಲ್ಲಾ ನಿವೇಶನಗಳನ್ನು ಜಪ್ತಿ ಮಾಡಲು ನಾನು ಸಿಎಂಗೆ ಮನವಿ ಸಲ್ಲಿಸಿದ್ದೇನೆ. 50:50 ಯೋಜನೆ ಅಡಿಯಲ್ಲಿ ಸೈಟ್ ಹಂಚಿಕೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಮಾಹಿತಿ ಇದ್ದು, ಅದನ್ನು ತಡೆಯಲು ಸಬ್-ರಿಜಿಸ್ಟರ್ ಕಚೇರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೂಡ ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, “ಮುಡಾ (MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯ ವರದಿ ಇನ್ನೂ ಪರಿಶೀಲನೆಗೆ ಒಳಪಟ್ಟಿಲ್ಲ. ಇದೇ ಕಾರಣಕ್ಕಾಗಿ ಮರೀಗೌಡ ಅವರು ರಾಜೀನಾಮೆ ನೀಡಿದ್ದಾರೆ, ಆದರೆ ಇನ್ನೂ ಇಬ್ಬರು ಮುಡಾ ಆಯುಕ್ತರು ಬಾಕಿಯಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ನನ್ನ ಒತ್ತಾಯಕ್ಕೆ ಸಿಎಂ ಪ್ರತಿಕ್ರಿಯಿಸುತ್ತಿದ್ದಾರೆ. ತನಿಖೆ ನಡೆಯುತ್ತಿದೆಯಲ್ಲಾ, ನೋಡೋಣ” ಎಂದು ಹೇಳಿದರು.ಇದನ್ನು ಓದಿ –ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
2020 ರಿಂದ 2024ರ ನಡುವೆ 50:50 ಅನುಪಾತದಲ್ಲಿ ಹಂಚಿಕೆಗೊಂಡ ಸುಮಾರು 1,400 ನಿವೇಶನಗಳನ್ನು ತಕ್ಷಣ ಜಪ್ತಿ ಮಾಡಿ, ವಿಚಾರಣೆ ನಡೆಸಬೇಕೆಂದು ಶ್ರೀವತ್ಸ ಅವರು ಆಗ್ರಹಿಸಿದ್ದಾರೆ. “ಅರ್ಹರಿದ್ದಲ್ಲಿ ಅವರನ್ನು ಪರಿಗಣಿಸಿ ನಿವೇಶನ ನೀಡಬೇಕು, ಇತರರಿಗೆ ನೀಡಿದ್ದನ್ನು ಜಪ್ತಿ ಮಾಡಬೇಕು. ಇದರ ಜೊತೆಗೆ, ಕೆಲವು ಮಂದಿಯು ತಮ್ಮ ಹಕ್ಕಿನ ಸೈಟ್‌ಗಳನ್ನು ಬೇರೆಗೂ ಮಾರಾಟ ಮಾಡಲು ಮುಂದಾಗಿದ್ದಾರೆ, ಇದನ್ನು ತಡೆಯಲು ಕೂಡ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ