ಫುಟ್ ಪಾತ್ ನಲ್ಲಿ ಚಲಿಸಿದ ಟ್ರಕ್: ಮಲಗಿದ್ದ 13 ಮಂದಿ ಕಾರ್ಮಿಕರ ದುರಂತ ಸಾವು

Team Newsnap
1 Min Read

ಪ್ರಧಾನಿ ಕಂಬನಿ – 2 ಲಕ್ಷ ರು ಪರಿಹಾರ ಘೋಷಣೆ

ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು 13 ಮಂದಿ ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.

ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ವೊಂದು ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ. ಈ ಪರಿಣಾಮ 13 ಮಂದಿ ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.

ಗುಜರಾತ್’ನ ಸೂರತ್ ನಗರದ ಕೊಸಂಬಾದಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಈ ಘಟನೆಯಲ್ಲಿ ಸಾವನ್ನಪ್ಪಿದ್ದ ಎಲ್ಲರೂ ಕಾರ್ಮಿಕರು. ರಾಜಸ್ಥಾನ ಮೂಲದವರಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ. ಈ ದುರ್ಘಟನೆ ಸಂಭವಿಸುವ ವೇಳೆ ಪಾದಚಾರಿ ಮಾರ್ಗದಲ್ಲಿ ಕಾರ್ಮಿಕರು ಮಲಗಿದ್ದರೆಂದು ಹೇಳಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಧಾನಿ ಕಂಬನಿ – 2 ಲಕ್ಷ ರು ಪರಿಹಾರ ಘೋಷಣೆ

ಅಮಾಯಕ ಕಾರ್ಮಿಕರ ದುರಂತ ಸಾವಿನ ಬಗ್ಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರ

ಸುರತ್ ನಲ್ಲಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ದುರಂತ ಸಾವು ಕಂಡ ಕಾರ್ಮಿಕರ ಪ್ರತಿ ಕುಟುಂಬ ಗಳಿಗೆ ತಲಾ 2 ಲಕ್ಷ ರು ಪರಿಹಾರ ಘೋಷಿಸಿದ್ದಾರೆ.

Share This Article
Leave a comment