January 16, 2025

Newsnap Kannada

The World at your finger tips!

kannada.thenewsnap.com

ಒಬ್ಬನ ಹೆಸರಲ್ಲಿ 12 ಆಸ್ಪತ್ರೆಯಲ್ಲಿ ಬೆಡ್ ಬುಕ್ – ಬೆಡ್ ಬ್ಲಾಕಿಂಗ್ ದಂಧೆಗೆ ಸಿಡಿದ ‘ಸೂರ್ಯ’

Spread the love

ಒಬ್ಬನ ಹೆಸರಲ್ಲಿ 12 ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಿರುವ ಬಿಬಿಎಂಪಿ ವಾರ್ ರೂಂ ದಂಧೆಯನ್ನು ಪತ್ತೆ ಮಾಡಿದ ಬಿಜೆಪಿ ಜನ ಪ್ರತಿನಿಧಿಗಳು ಮಧ್ಯರಾತ್ರಿಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹೋಮ್ ಐಸೋಲೇಶನ್ ಗೆ ಒಳಗಾಗುವ ವ್ಯಕ್ತಿಯ ಹೆಸರಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವ ಮಹಾದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಬಯಲು ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಇದೀಗ ಸ್ವಪಕ್ಷೀಯ ಸಂಸದ ಹಾಗು ಶಾಸಕರಿಂದಲೇ ಬಯಲಾಗಿದೆ.

ವಾರ್ ರೂಂ ಅಧಿಕಾರಿಗಳನ್ನು ತೇಜಸ್ವಿ ಸೂರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸುದ್ದಿಗೋಷ್ಠಿಯಲ್ಲಿ ಶಾಸಕ ಸತೀಶ್ ರೆಡ್ಡಿ ಹಾಗೂ ರವಿಸುಬ್ರಹ್ಮಣ್ಯ
ಎಲ್ಲಾ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಓರ್ವ ಸೋಂಕಿತನ ಹೆಸರಲ್ಲಿ ಬರೋಬ್ಬರಿ 12 ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿರಿಸಲಾಗಿದೆ. ಮೀಸಲಿಟ್ಟ ಬೆಡ್ ಗಳನ್ನು ಅಧಿಕಾರಿಗಳು ಸಾವಿರಾರ ರೂಪಾಯಿಗೆ ಮಾರಾಟ ಮಾಡುತ್ತಿರುವುದನ್ನು ಬಯಲು ಮಾಡಿದ್ದಾರೆ.

ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಬೆಡ್ ಬಗ್ಗೆ ವಿಚಾರಿಸುತ್ತಾರೆ. ಈ ವೇಳೆಯಲ್ಲಿ ಎಲ್ಲಾ ಲಕ್ಷಣ ಕಂಡುಬಂದ ರೋಗಿಗಳಿಗೆ ಮನೆಯಲ್ಲಿಯೇ ಐಸೋಲೇಷನ್ ಆಗುವಂತೆ ಸೂಚಿಸಲಾಗುತ್ತದೆ. ಆದರೆ ಸೋಂಕಿತರಿಂದ ವೈಯಕ್ತಿಕ ಮಾಹಿತಿಯ ಜೊತೆಗೆ ಬಿಯು ಸಂಖ್ಯೆಯನ್ನು ಪಡೆದು ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡುತ್ತಿದ್ದರು. ನಂತರ ದುಬಾರಿ ಹಣಕ್ಕೆ ಬೆಡ್ ಮಾರಾಟ ಮಾಡವ ದಂಧೆಯನ್ನು ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿದ್ದರು

Join our WhatsApp group –

https://chat.whatsapp.com/CCR8jY9CI6HGUbm5jWYjSe

LATEST POST

Copyright © All rights reserved Newsnap | Newsever by AF themes.
error: Content is protected !!