ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ಆಸ್ತಿ ಅಫಿಡವಿಟ್ ವಿವರ ಇಲ್ಲಿದೆ.
40.04 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವ ಗೀತಾ, ಪತಿ ಶಿವರಾಜ್ ಕುಮಾರ್ ಬಳಿ ಇದೆ 49 ಕೋಟಿ ರೂ. ಆಸ್ತಿ ಅಂತ ತಿಳಿಸಿದ್ದಾರೆ.
ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಗೀತಾಶಿವರಾಜ್‌ಕುಮಾರ್. ಇದಲ್ಲದೇ 2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದು, ಪತಿ ಆದಾಯ 2.97 ಕೋಟಿ ರೂ. ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ ಅಂತ ಉಲ್ಲೇಖ ಮಾಡಿದ್ದಾರೆ.
ಶಿವಣ್ಣ ಬಳಿ 22,58,338 ರು ಹಾಗೂ ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ ಅಂತ ಹೇಳಿದ್ದಾರೆ.
ಗೀತಾ ಅವರ ಬಳಿಯಲ್ಲಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. 30 ಕೆಜಿ ಬೆಳ್ಳಿಯೂ ಅವರ ಬಳಿ ಇದೆಯಂತೆ.‘ಕಳ್ ನನ್ಮಗ ಯಾರು ಎಂದು ತೋರಿಸಿ’- ಹೆಚ್‌ಡಿಕೆ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ
ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಎಂದು ಉಲ್ಲೇಖ ಮಾಡಿದ್ದಾರೆ. ಮಾನ್ಯತಾ ರೆಸಿಡೆನ್ಸಿಯಲ್ಲಿ ಬರೋಬ್ಬರಿ 1.48 ಎಕರೆಯಲ್ಲಿ ಜಂಟಿಯಾಗಿ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್‌ಕುಮಾರ್ ಮನೆ ಹೊಂದಿದ್ದು, ಇದರ ಮೌಲ್ಯವೇ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು