ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿ 11 ಕ್ರೀಡಾಪಟುಗಳು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು

Team Newsnap
1 Min Read

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 11 ಮಂದಿ ಕ್ರೀಡಾಪಟುಗಳ ಹೆಸರುಗಳನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ದೇಶದ ಮೊದಲ ಫೂಟ್​ಬಾಲರ್ ಎಂದೇ ಕರೆಸಿಕೊಳ್ಳುವ ಸುನಿಲ್ ಚೆಟ್ರಿ ಹೆಸರೂ ಕೂಡ ಈ ಪಟ್ಟಿಯಲ್ಲಿದೆ.

ಖೇಲ್​ ರತ್ನ ಪ್ರಶಸ್ತಿ 11 ಮಂದಿ ಹೆಸರು ಶಿಫಾರಸು

ನೀರಜ್ ಚೋಪ್ರಾ (ಅಥ್ಲೆಟಿಕ್ಸ್)

ನೀರಜ್ ಚೋಪ್ರಾ (ಅಥ್ಲೆಟಿಕ್ಸ್)

ಪಿಆರ್ ಶ್ರೀಜೇಶ್ (ಹಾಕಿ)

ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್)

ಸುನಿಲ್ ಛೆಟ್ರಿ (ಫುಟ್‌ಬಾಲ್)

ಮಿಥಾಲಿ ರಾಜ್ (ಕ್ರಿಕೆಟ್)

ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)

ಸುಮಿತ್ ಆಂಟಿಲ್ (ಜಾವೆಲಿನ್)

ಅವನಿ ಲೇಖರ (ಶೂಟಿಂಗ್)

ಕೃಷ್ಣ ನಗರ (ಬ್ಯಾಡ್ಮಿಂಟನ್)

ಎಂ ನರ್ವಾಲ್ (ಶೂಟಿಂಗ್)

ಕಳೆದ ವರ್ಷ ಐವರು ಅಥ್ಲೀಟ್​ಗಳನ್ನು ಆಯ್ಕೆ ಮಾಡಲಾಗಿತ್ತು.

ಈ ಬಾರಿ ಒಟ್ಟು 11 ಕ್ರೀಡಾಪಟುಗಳನ್ನು ಶಿಫಾರಸು ಮಾಡಲಾಗಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್ ಇದ್ದುದರಿಂದ ಘೋಷಣೆ ತಡವಾಯಿತು.

ಇನ್ನು 35 ಅಥ್ಲೀಟ್​ಗಳನ್ನು ಅರ್ಜುನ ಅವಾರ್ಡ್​ಗೆ ಶಿಫಾರಸು ಮಾಡಲಾಗಿದೆ.

ಕಳೆದ ವರ್ಷ 8 ಮಂದಿಯನ್ನಷ್ಟೇ ಶಿಫಾರಸು ಮಾಡಲಾಗಿತ್ತು.

Share This Article
Leave a comment