Main News

ಶಿರಸಿ-ಕುಮಟಾ ರಸ್ತೆಗೆ 10,000 ಮರಗಳ ಬಲಿ

ಶಿರಸಿ-ಕುಮಟಾದ 36 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯ ಮೇಲ್ದರ್ಜೆ ಯೋಜನೆಗೆ 10,000 ಮರಗಳನ್ನು ಉರುಳಿಸಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ‌ ನೀಡಿದ್ದು, ಶಿರ್ಸಿಯ ನಿಲೇಕಣಿ ಕ್ರಾಸ್‌ನಿಂದ ದೇವಿಮನೆ ಘಟ್ಟದವರೆಗೆ ರಸ್ತೆಯ ಅಕ್ಕಪಕ್ಕ ಕತ್ತರಿಸಬೇಕಾದ ಮರಗಳಿಗೆ ಈಗ ಗುರುತು ಮಾಡಲಾಗಿದೆ.

ನಿಲೇಕಣಿ ಕ್ರಾಸ್‌ನಿಂದ ಹನುಮಂತಿಯವರೆಗೆ 5,700 ಮರಗಳು ಮತ್ತು ಹನುಮಂತಿಯಿಂದ ದೇವಿಮನೆ ಘಟ್ಟದವರೆಗೆ 4,000 ಮರಗಳನ್ನು ಕತ್ತರಿಸುವ ಕಾರ್ಯಾಚರಣೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನೆ ನೀಡಿದೆ.

ವರ್ಷಂ ಪ್ರತೀ ಯಾವುದೋ ಯೋಜನೆಗೋಸ್ಕರ ಪಶ್ಚಿಮಘಟ್ಟದ ಸಾವಿರಾರು ಮರಗಳನ್ನು ಸರ್ಕಾರ ಉರುಳಿಸುತ್ತಲೇ ಬರುತ್ತಿದೆ. ಆದರೆ ಅಲ್ಲಿ ನಾಶವಾಗುವ ಮೌಲ್ಯಾತೀತವಾದ ಮರಗಳ ಬಗ್ಗೆ ಸರ್ಕಾರದ ಗಮನವಿಲ್ಲದಂತೆ ವರ್ತನೆ ನಡೆಸಿದೆ. ಕತ್ತರಿಸಲು ಗುರುತು ಹಾಕಿರುವ ಮರಗಳು 30 ಸೆಂ.ಮೀ.ನಿಂದ ಹಿಡಿದು 60 ಸೆಂ.ಮೀ., 61- 90 ಸೆಂ.ಮೀ., 91- 120 ಸೆಂ.ಮೀ., 121- 150 ಸೆಂ.ಮೀ. ಹಾಗೂ 150 ಸೆಂ.ಮೀ. ಸುತ್ತಳತೆಯನ್ನು ಹೊಂದಿವೆ.

ಕತ್ತರಿಸಲು ಯೋಜಿಸಿರುವ ಮರಗಳಲ್ಲಿ ತೇಗ, ಮತ್ತಿ, ಹೊನಲು, ಹೊನ್ನೆ, ಅರಳಿ, ಹಾಲ, ಕೆಸಳಾ, ಕೆಂದಾಳ, ಮಾವು, ಗೇರು, ಹಲಸು, ಕಾಸರಕಾ, ನಂದಿ, ನೆಲ್ಲಿ, ಕವಲು, ಕಾಡಮಟೆ, ಜಂಗ್ಲಿ, ದೂಪಾ, ಚಂದಕಲಾ, ಉಪ್ಪಾಗೆ, ಹುಣಸೆ, ಹೊಂಗೆ, ಹಲಗಾ ಹೀಗೆ ನೂರಕ್ಕು ಹೆಚ್ಚು ಜಾತಿಯ ಮರಗಳು ನೆಲಕ್ಕುರಳಲಿವೆ.

ರಸ್ತೆಯನ್ನು ಮೇಲ್ದರ್ಜೆಗೇರಿಸಲು ಇಂತಹ ಮರಗಳನ್ನು ಧರೆಗುರುಳಿಸುವುದು ಅವಶ್ಯಕವೇ?

Team Newsnap
Leave a Comment
Share
Published by
Team Newsnap

Recent Posts

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024