100 ರು ಹಳೇ ನೋಟು ಮಾಚ್೯ ಮಾಸಾಂತ್ಯಕ್ಕೆ ರದ್ದು

Team Newsnap
1 Min Read

100 ರೂಪಾಯಿ ಮುಖಬೆಲೆಯ ಹಳೇ ನೋಟುಗಳ ಚಲಾವಣೆ ಸ್ಥಗಿತಗೊಳ್ಳುವ ಕಾಲ ಸನಿಹದಲ್ಲಿದೆ.

ಈ ಬಗ್ಗೆ ಆರ್‌ಬಿಐ ಎಜಿಎಂ ಮಹೇಶ್ ಅವರೇ ಮಾಹಿತಿ ನೀಡಿದ್ದಾರೆ. ಇದೇ ಮಾರ್ಚ್‌ ಅಂತ್ಯದ ವೇಳೆಗೆ 100 ರು ಮುಖಬೆಲೆಯ ಹಳೇ ನೋಟುಗಳನ್ನು ಹಿಂಪಡೆಯಲಾಗುವುದು.

ಇದು ನೋಟು ಅಮಾನ್ಯೀಕರಣ ಅಲ್ಲ ಎಂದಿರುವ ಅವರು, ಈ ನೋಟನ್ನು ಪ್ರಸರಣದಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 1,000 ಮತ್ತು 500 ರೂ. ಮುಖಬೆಲೆಯ ನೋಟು ರದ್ದು ಮಾಡಿ ನಾಲ್ಕು ವರ್ಷ ಕಳೆದಿದೆ. ಕಪ್ಪು ಹಣ, ಭಯೋತ್ಪಾದನೆ ಮತ್ತು ಖೋಟಾನೋಟು ದಂಧೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ನಗದು ರಹಿತ ಆರ್ಥಿಕತೆಗಾಗಿ ನೋಟು ರದ್ದು ಮಾಡಲಾಗಿತ್ತು.

ಇದೀಗ 100 ರೂ. ಮುಖಬೆಲೆಯ ಹಳೇ ನೋಟಿನ ಪ್ರಸರಣ ಹಿಂದಕ್ಕೆ ಪಡೆದು ಗ್ರಾಹಕರಿಗೆ ಉತ್ತಮ ನೋಟ್ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ.

Share This Article
Leave a comment