1 ಕೋಟಿ ರು ಲಂಚ ಪಡೆದ ಆರೋಪ: ಸಿಬಿಐನಿಂದ ಹಿರಿಯ ರೇಲ್ವೆ ಅಧಿಕಾರಿ ಬಂಧನ

Team Newsnap
1 Min Read
Gururaghavendra, Vasishtha Souharda Bank scam to be investigated by CBI: Minister S.T. S ಗುರುರಾಘವೇಂದ್ರ, ವಸಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐ ತನಿಖೆಗೆ : ಸಚಿವ ಎಸ್.ಟಿ. ಎಸ್

1 ಕೋಟಿ ರು ಲಂಚ ಪಡೆದ ಆರೋಪದ ಮೇಲೆ ಹಿರಿಯ ರೇಲ್ವೆ ಅಧಿಕಾರಿಯೊಬ್ಬರನ್ನು ಸಿಬಿಐ ಬಂಧಿಸಿದೆ.

ಇಂಡಿಯನ್ ರೇಲ್ವೆ ಸರ್ವೀಸ್​ ಆಫ್ಇಂಜಿನಿಯರ್ಸ್ ನ ಹಿರಿಯ ಅಧಿಕಾರಿ ಮಹೇಂದ್ರ ಸಿಂಗ್ ಚೌಹಾಣ್ ಬಂಧಿತರು.

ಮಹೇಂದ್ರ ಚೌಹಾಣ್ ಅವರು ಈಶಾನ್ಯ ಗಡಿನಾಡು ರೇಲ್ವೆಯ ಗುತ್ತಿಗೆ ನೀಡಲು ಕಂಪನಿಯೊಂದರಿಂದ 1 ಕೋಟಿ ರು ಲಂಚ ಪಡೆದಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಚೌಹಾಣ್ ಪರವಾಗಿ ಅವರ ಸಂಬಂಧಿಯೊಬ್ಬರು ಲಂಚದ ಹಣ ಸ್ವೀಕರಿಸಲು ಹೋದಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೌಹಾಣ್ ಪ್ರಸ್ತುತ ಅಸ್ಸಾಂನ ಮಾಲಿಗಾಂವ್‌ನಲ್ಲಿರುವ ಎನ್‌ಎಫ್‌ಆರ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಲಂಚದ ಹಣವನ್ನು ವಶಪಡಿಸಿಕೊಂಡಿರುವ ಸಿಬಿಐ ದೆಹಲಿ, ಅಸ್ಸಾಂ, ಉತ್ತರಾಖಂಡ ಮತ್ತು ಇತರ ಎರಡು ರಾಜ್ಯಗಳಲ್ಲಿ ಶೋಧ ನಡೆಸುತ್ತಿದೆ .

Share This Article
Leave a comment