April 6, 2025

Newsnap Kannada

The World at your finger tips!

crime scene

ಅರ್ಚಕರಿಗೆ ಸೇರಬೇಕಿದ್ದ 1.87 ಕೋಟಿ ಲೂಟಿ – ಮುಜರಾಯಿ ಇಲಾಖೆಯಲ್ಲಿ ಭಾರೀ ಅವ್ಯವಹಾರ

Spread the love

ರಾಯಚೂರು: ಲಿಂಗಸುಗೂರಿನ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮುಜರಾಯಿ ಇಲಾಖೆಯ ಹಣವನ್ನು ಲೂಟಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದೇವಾಲಯದ ಅರ್ಚಕರಿಗೆ ಕೊಡಬೇಕಾದ ₹1,87,86,561 ಹಣವನ್ನು ಲೂಟಿ ಮಾಡಿ, ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು ಮತ್ತು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಯಲಾಗಿದೆ.

ಕೆನರಾ ಬ್ಯಾಂಕ್‌ನ ಕೆಲ ಸಿಬ್ಬಂದಿಯ ಸಹಕಾರದಿಂದ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ, ಈ ಹಣವನ್ನು ಲಪಟಾಯಿಸಿದ ಆರೋಪ ಕೇಳಿಬಂದಿದೆ.

ಈ ಅವ್ಯವಹಾರದಲ್ಲಿ ಕಚೇರಿಯ ಐದು ಅಧಿಕಾರಿಗಳು ಸೇರಿಕೊಂಡಿದ್ದು, ದ್ವಿತೀಯ ದರ್ಜೆ ಸಹಾಯಕ (SDA) ಯಲ್ಲಪ್ಪನ ಪತ್ನಿ, ಮಗ, ಮಗಳು, ಟೆಕ್ಸಟೈಲ್ ಮತ್ತು ಕಿರಾಣಿ ಅಂಗಡಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ -MUDA ಹಗರಣ: ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ – ಲೋಕಾಯುಕ್ತ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆ

ಈ ಹಗರಣ ಸಂಬಂಧ ಲಿಂಗಸುಗೂರು ತಹಶೀಲ್ದಾರ್ ಶಂಶಾಲಂ ಅವರ ದೂರಿನ ಮೇರೆಗೆ, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ SDA ಯಲ್ಲಪ್ಪ ಮತ್ತು ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!