ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಿದ್ದರಿಂದ ಬಿರುಕು ಬಿಟ್ಟ 1.16ಕೋಟಿ ರು ವೆಚ್ಚದ ರಸ್ತೆ

Team Newsnap
1 Min Read

1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಒಡೆದ ತೆಂಗಿನ ಕಾಯಿಯಿಂದ  ರಸ್ತೆ ಬಿರುಕು ಬಿಟ್ಟಿದೆ

ಈ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ಜರುಗಿದೆ. 1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 7ಕಿ.ಮೀ ಉದ್ದ ಹೊಸ ರಸ್ತೆಯ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ, ಕಾಯಿ ಬದಲು ರಸ್ತೆಯೇ ಬಿರುಕು ಬಿಟ್ಟಿದೆ.

ಈ ಘಟನೆಯಿಂದ ಮುಜುಗರಕ್ಕೀಡಾಗಿ ಆಡಳಿತಾರೂಢ ಬಿಜೆಪಿ ಶಾಸಕಿ ಸುಚಿ ಮೌಸಂ ಚೌದರಿ, ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ತಮ್ಮ ಕ್ಷೇತ್ರದಲ್ಲಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ 7.5 ಕಿಮೀ ರಸ್ತೆ ಕಾಮಗಾರಿ ಕೈಗೊಂಡಿದೆ. ಇದರ ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಕಾಯಿ ತುಂಡಾಗದೇ ರಸ್ತೆಯೇ ಹೋಳಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಕಾಮಗಾರಿಯಲ್ಲಿ ದಕ್ಷತೆ ಇಲ್ಲದಿರುವುದು ಕಂಡುಬಂದಿದೆ ಎಂದು ಬಿಜನೋರ್ ಶಾಸಕಿ ತಿಳಿಸಿದ್ದಾರೆ.

Share This Article
Leave a comment