January 28, 2026

Newsnap Kannada

The World at your finger tips!

srir

ಹಿರಿಯರ ಆತ್ಮಕ್ಕೆ ಮುಕ್ತಿ ಕೋರಿ ೫೦೧ ಗಣ್ಯ ವ್ಯಕ್ತಿಗಳಿಗೆ ಪಿಂಡ ಪ್ರದಾನ ಮಾಡಿದ ಹೇಮಂತ್

Spread the love

ಪಿತೃಪಕ್ಷದ ಸಂದರ್ಭದಲ್ಲಿ‌ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ‌ ಮಾಡಿ ತಿಲ ತರ್ಪಣ ಬಿಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯ.

ಆದರೆ ನಮ್ಮ ನಡುವಿನ ಒಬ್ಬ ನಿಸ್ವಾರ್ಥ ಸೇವಕರೊಬ್ಬರು ದೇಶದಲ್ಲಿ ಅಗಲಿದ ಗಣ್ಯಾತಿಗಣ್ಯರಿಗೆ, ಹುತಾತ್ಮ ಸೈನಿಕರಿಗೆ ಪಿಂಡ ಪ್ರದಾನ‌ ಮಾಡಿ, ತಿಲ ತರ್ಪಣ ಬಿಟ್ಟು ಸಾರ್ಥಕತೆಯನ್ನು ಮೆರೆದಿದ್ದಾರೆ.

ಬಿಜೆಪಿಯ ಮಾಧ್ಯಮ ಸದಸ್ಯ, ಹಿರಿಯರ ಪತ್ರಕರ್ತ ಹೇಮಂತ್ ನಮ್ಮ ದೇಶದ ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಿನಿಮಾ ರಂಗ, ದೇಶದ ಸೇನೆಯ ಕ್ಷೇತ್ರ ಹೀಗೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿ‌ ನಮ್ಮನ್ನಗಲಿದ ಗಣ್ಯರಿಗೆ. ಹುತಾತ್ಮರಾದ ಸೈನಿಕರಿಗೆ ಪ್ರತಿವರ್ಷ ತಪ್ಪದೇ ಪಿಂಡ ಪ್ರದಾನ ಮಾಡಿ ಹಿರಿಯರ ಸೇವೆ ಮಾಡುತ್ತಾ ಬಂದಿದ್ದಾರೆ ಹೇಮಂತ್
ಶ್ರೀರಂಗಪಟ್ಟಣದ ವೇದ ವಿದ್ವಾನ್ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಪತ್ರಕರ್ತ ಹನುಮೇಶ್ ಯಾವಗಲ್ ಕೂಡ ಪಾಲ್ಗೊಂಡಿದ್ದರು.

error: Content is protected !!