ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎನ್ನುವುದು ತಿರುಕನ ಕನಸು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಲೇವಡಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶಾಸಕ ಜಮೀರ್ ಕೂಡ ಚುನಾವಣೆ ಯಾವಾಗ ಬಂದರೂ ಸಿದ್ದರಾಮಯ್ಯ ಸಿಎಂ ಆಗುವದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಹೇಳಿರುವುದಕ್ಕೆ ರವಿ ಪ್ರತಿಕ್ರಿಯೆ ನೀಡಿದರು.
ಧಾರವಾಡದಲ್ಲಿ ಪದವೀಧರ ಚುನಾವಣಾ ಪ್ರಚಾರವಾಗಿ ಬಿಜೆಪಿಯ ಅಭ್ಯರ್ಥಿ ಪ್ರೋ.ಎಸ್.ವಿ.ಸಂಕನೂರ ಪರ ಮತಯಾಚಣೆ ಕಾರ್ಯದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಮಾತು ಹೇಳುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ತವರಿನಲ್ಲೇ ಅವರವರ ಪಕ್ಷವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್ ಬೆಂಗಳೂರಿನಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ ಇನ್ನೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದು ದೂರದ ಮಾತು” ಎಂದು ಕಿಡಿಕಾರಿದ್ದಾರೆ.
“ಮೈಸೂರು, ಬಾಗಲಕೋಟೆಯಲ್ಲಿ ತಮ್ಮ ಪಕ್ಷ ಗೆಲ್ಲಿಸಲು ಸಿದ್ದರಾಮಯ್ಯಗೆ ಅವರಿಗೆ ಆಗಿಲ್ಲ, ಇನ್ನೂ ಜನ ಯಾತಕ್ಕಾಗಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಸಮಾಜ ಒಡೆಯುವುದಕ್ಕಾ?” ಎಂದು ಪ್ರಶ್ನಿಸಿದರು.
“ತಮ್ಮದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ಕೊಡದಂತಹ ಪಾರ್ಟಿ ಅದು. ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದಿರುವುದು ಕಾಂಗ್ರೆಸ್ ಕೋಟಾ ಸದ್ಯಕ್ಕೆ ಮುಗಿದಿದೆ. ಹೀಗಾಗಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಇನ್ನು ಎರಡೂವರೆ ವರ್ಷದಲ್ಲಿ ಬಿಜೆಪಿ ಇನ್ನಷ್ಟು ಶಕ್ತಿ ಶಾಲಿ ಆಗುತ್ತದೆ. ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಮಾತ್ರವೇ ಗೆಲ್ಲಬೇಕಷ್ಟೇ, ಭಾರತದಲ್ಲಿ ಅಲ್ಲ” ಎಂದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು