November 16, 2024

Newsnap Kannada

The World at your finger tips!

voting

ವಿಧಾನ ಪರಿಷತ್ ಚುನಾವಣೆ : 25 ಕ್ಷೇತ್ರಗಳಲ್ಲಿ ಮತದಾನ ಆರಂಭ – ಬಿಜೆಪಿ- ಕೈ. ನಡುವೆ ಹಣಾಹಣಿ

Spread the love

ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ 25 ಕ್ಷೇತ್ರಗಳ ಮತದಾನ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ

ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಪಾಲಿಗೆ ಮೇಲ್ಮನೆ ಕದನ ನಿರ್ಣಾಯಕವಾಗಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಪರಿಷತ್​ನ 25 ಕ್ಷೇತ್ರಗಳ ಚುನಾವಣೆ ಮಹತ್ವ ಪಡೆದಿದೆ.

ಒಟ್ಟು 25 ಕ್ಷೇತ್ರಗಳಲ್ಲಿ ಆಡಳಿತರೂಢ ಪಕ್ಷ ಬಿಜೆಪಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್​ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಇನ್ನು ಜೆಡಿಎಸ್ ಕೇವಲ ಆರು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.
25 ಕ್ಷೇತ್ರಗಳು. 90 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
ಇನ್ನು 25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ರೆ, ಒಬ್ಬರು ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿದ್ದಾರೆ ಕಾಂಗ್ರೆಸ್​ನ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಬಹುಮತಕ್ಕೆ ಒಟ್ಟು 39 ಸ್ಥಾನಗಳ ಅಗತ್ಯವನ್ನು ಎದುರಿಸುತ್ತಿದೆ. ಸದ್ಯ 32 ಸದಸ್ಯರ ಬಲ ಹೊಂದಿರುವ ಬಿಜೆಪಿಗೆ ಒಬ್ಬ ಪಕ್ಷೇತರರ ಬೆಂಬಲ ಲಭಿಸಿತ್ತು. ಇದೀಗ ಆ ಪಕ್ಷೇತರ ಅಭ್ಯರ್ಥಿ ಸೇರಿದಂತೆ 6 ಸದಸ್ಯರ ಸ್ಥಾನ ತೆರವಾಗಿದೆ. ಈ ಆರು ಸ್ಥಾನಗಳ ಜೊತೆ ಇನ್ನೂ ಐದಾರು ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಬಿಜೆಪಿಗಿದೆ.

ವಿಪಕ್ಷ ಕಾಂಗ್ರೆಸ್ ಒಟ್ಟು 29 ಸದಸ್ಯರ ಬಲ ಹೊಂದಿದೆ ಸದ್ಯ 25ರ ಪೈಕಿ 13 ಕಾಂಗ್ರೆಸ್ ಸದಸ್ಯರ ಅವಧಿ ಮುಕ್ತಾಯವಾಗುತ್ತಿದೆ. ಹಾಲಿ 13ರ ಪೈಕಿ ಕೇವಲ ಮೂವರು ಸದಸ್ಯರು ಮಾತ್ರ ಮರು ಆಯ್ಕೆಗಾಗಿ ಕಣದಲ್ಲಿದ್ದಾರೆ ಉಳಿದಂತೆ ಪಕ್ಷ ಹೊಸಬರಿಗೆ ಮಣೆ ಹಾಕಿದೆ.

ಮತದಾನ ಮಾಡುವ ಹಕ್ಕು ಯಾರಿಗಿದೆ ?

ಗ್ರಾಮ ಪಂಚಾಯಿತಿ ಸದಸ್ಯರು
ಪಟ್ಟಣ ಪಂಚಾಯಿತಿ ಸದಸ್ಯರು
ಪುರಸಭೆ ಸದಸ್ಯರು
ನಗರಸಭೆ ಸದಸ್ಯರು
ಮಹಾನಗರ ಪಾಲಿಕೆ ಸದಸ್ಯರು
ಎಲ್ಲಾ ನಾಮ ನಿರ್ದೇಶಿತ ಸದಸ್ಯರು
ಆಯಾ ಕ್ಷೇತ್ರಗಳ ಶಾಸಕರು
ವಿಧಾನ ಪರಿಷತ್ ಸದಸ್ಯರು
ಆಯಾ ಕ್ಷೇತ್ರಗಳ ಸಂಸದರಿಗೆ ಮತದಾನ ಮಡೋ ಹಕ್ಕು ಇದೆ.

Copyright © All rights reserved Newsnap | Newsever by AF themes.
error: Content is protected !!