Trending

ರಾಜಕೀಯ ನಾಯಕರ ಅನುಪಸ್ಥಿತಿಯಲ್ಲಿ ಭಾರತ; ಗೊಂದಲದ ಬಗ್ಗೆ ಬೇಕಿದೆ ಸ್ಪಷ್ಟತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಸ್ಪತ್ರೆಯಲ್ಲಿ‌ ದಾಖಲಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ.ಕಳೆದ ಆರು ತಿಂಗಳಲ್ಲಿ ಶಾ ಅವರು ಒಟ್ಟು ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋವಿಡ್ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಅಗಸ್ಟ್ ನಲ್ಲಿ ಶಾ ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಾಗಿದ್ದರು. ಆಗಸ್ಟ್ ೧೪ರಂದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಅವರು ಮತ್ತೆ ಆಗಸ್ಟ್ ೧೭ರಂದು‌ ಮತ್ತೊಂದು ಖಾಯಿಲೆಯ ನಿಮಿತ್ತ ದಾಖಲಾಗಿದ್ದರು. ಈಗ ಸಂಸತ್ತು ಅಧಿವೇಶನದ ಸಮಯದಲ್ಲೂ ಅವರು ಆಸ್ಪತ್ರೆಯಲ್ಲಿದ್ದಾರೆ. ಹೀಗೆ ಕಳೆದ ೬ ತಿಂಗಳಿಂದ ದೇಶದ ಎರಡನೇ ಪ್ರಭಾವಿ‌ ನಾಯಕನ ಆರೋಗ್ಯದ ಬಗ್ಗೆ ಗೊಂದಲಗೊಂಡಿರುವ ಪ್ರಜೆಗಳ ನಡುವೆ ಶಾ ಯಾವುದೋ ಗಂಭೀರ ಖಾಯಿಲೆಯಿಂದಲೇ ಬಳಲುತ್ತಿದ್ದಾರೆ ಎಂದು‌ ಊಹಾಪೋಹ-ವದಂತಿಗಳು ಹಬ್ಬುತ್ತಿವೆ. ೬ ತಿಂಗಳಿಂದ ಕೇಂದ್ರ ಗೃಹ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದೇ ಇದಕ್ಕೆ ಕಾರಣ ಎನ್ನುತ್ತಾರೆ ರಾಜಕೀಯ ತಜ್ಞರು.

ಚೀನಾ-ಭಾರತ ಗಡಿ ವಿವಾದ, ಭಾರತದಲ್ಲಿ‌ ಕೊರೋನಾ ಹೆಚ್ಚಳವಾಗುತ್ತಿರುವ ವಿಚಾರ, ಜಮ್ಮು-ಕಾಶ್ಮೀರದ ಬಿಕ್ಕಟ್ಟು ಮುಂತಾದ ವಿಷಯಗಳ ಚರ್ಚೆಯನ್ನು ಸಂಸತ್ತಿನ ಅಧಿವೇಶನದಲ್ಲಿ‌ ಹಮ್ಮಿಕೊಂಡಿರುವಾಗ ದೇಶದ ಎರಡನೇ ಪ್ರಮುಖ ವ್ಯಕ್ತಿಯ ಅನುಪಸ್ಥಿತಿ‌ ನಿಜಕ್ಕೂ ಗಂಭೀರ ಆಲೋಚನೆಗೆ ತಳ್ಳುವಂಥಹ ವಿಚಾರ.

ಇನ್ನಾದರೂ ಕೇಂದ್ರವು ಇದರ ಬಗ್ಗೆ ಮೌನ ಮುರಿದು ಶಾ ಅವರ ಆರೋಗ್ಯದ ಬಗೆಗಿನ ಮಾಹಿತಿಯನ್ನು ನೀಡಬೇಕಿದೆ. ದೇಶದ ಜನಗಳ ಮತ ಪಡೆದು ಗೆದ್ದು ಬಂದ ರಾಜಕೀಯ ನಾಯಕನ ಅರೋಗ್ಯ, ಆಡಳಿತ ನಿರ್ವಹಿಸುವಷ್ಟು ಶಕ್ತವಾಗಿದಿಯೇ? ಇಲ್ಲವೇ ಎಂಬುದನ್ನು ಸರ್ಕಾರವೇ ಹೇಳಬೇಕು. ಹೀಗೆ ಹೇಳುವದರಿಂದ ಶಾ ಅವರ ಆರೋಗ್ಯವೇನೂ ವಾಸಿಯಾಗುವದಿಲ್ಲ. ಆದರೆ ದೇಶದಲ್ಲಿನ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಇನ್ನಷ್ಟು ಗಾಢಗೊಳ್ಳಬಹುದು.

Team Newsnap
Leave a Comment
Share
Published by
Team Newsnap

Recent Posts

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾಗೆ ಆಹ್ವಾನಬೆಂಗಳೂರು

ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿಗಳಾದ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ… Read More

September 26, 2024

ರಾಜ್ಯಾದ್ಯಂತ ಮುಂದಿನ 5 ದಿನ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.… Read More

September 26, 2024

ಕ್ಯಾಂಟರ್ ಗೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ಕ್ಯಾಂಟರ್ ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.… Read More

September 26, 2024

ರಾಜ್ಯ ಸರ್ಕಾರದಿಂದ 318 ಪಿಡಿಒ ಅಮಾನತು

ಬೆಂಗಳೂರು : ರಾಜ್ಯ ಸರ್ಕಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಾಲಮಿತಿಯೊಳಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318… Read More

September 26, 2024

ಬಿಜೆಪಿ ಕಾರ್ಯಕರ್ತರಿಂದ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ… Read More

September 25, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 25 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 70,600 ರೂಪಾಯಿ ದಾಖಲಾಗಿದೆ. 24… Read More

September 25, 2024