ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ.ಕಳೆದ ಆರು ತಿಂಗಳಲ್ಲಿ ಶಾ ಅವರು ಒಟ್ಟು ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಅಗಸ್ಟ್ ನಲ್ಲಿ ಶಾ ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಾಗಿದ್ದರು. ಆಗಸ್ಟ್ ೧೪ರಂದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಅವರು ಮತ್ತೆ ಆಗಸ್ಟ್ ೧೭ರಂದು ಮತ್ತೊಂದು ಖಾಯಿಲೆಯ ನಿಮಿತ್ತ ದಾಖಲಾಗಿದ್ದರು. ಈಗ ಸಂಸತ್ತು ಅಧಿವೇಶನದ ಸಮಯದಲ್ಲೂ ಅವರು ಆಸ್ಪತ್ರೆಯಲ್ಲಿದ್ದಾರೆ. ಹೀಗೆ ಕಳೆದ ೬ ತಿಂಗಳಿಂದ ದೇಶದ ಎರಡನೇ ಪ್ರಭಾವಿ ನಾಯಕನ ಆರೋಗ್ಯದ ಬಗ್ಗೆ ಗೊಂದಲಗೊಂಡಿರುವ ಪ್ರಜೆಗಳ ನಡುವೆ ಶಾ ಯಾವುದೋ ಗಂಭೀರ ಖಾಯಿಲೆಯಿಂದಲೇ ಬಳಲುತ್ತಿದ್ದಾರೆ ಎಂದು ಊಹಾಪೋಹ-ವದಂತಿಗಳು ಹಬ್ಬುತ್ತಿವೆ. ೬ ತಿಂಗಳಿಂದ ಕೇಂದ್ರ ಗೃಹ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದೇ ಇದಕ್ಕೆ ಕಾರಣ ಎನ್ನುತ್ತಾರೆ ರಾಜಕೀಯ ತಜ್ಞರು.
ಚೀನಾ-ಭಾರತ ಗಡಿ ವಿವಾದ, ಭಾರತದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ವಿಚಾರ, ಜಮ್ಮು-ಕಾಶ್ಮೀರದ ಬಿಕ್ಕಟ್ಟು ಮುಂತಾದ ವಿಷಯಗಳ ಚರ್ಚೆಯನ್ನು ಸಂಸತ್ತಿನ ಅಧಿವೇಶನದಲ್ಲಿ ಹಮ್ಮಿಕೊಂಡಿರುವಾಗ ದೇಶದ ಎರಡನೇ ಪ್ರಮುಖ ವ್ಯಕ್ತಿಯ ಅನುಪಸ್ಥಿತಿ ನಿಜಕ್ಕೂ ಗಂಭೀರ ಆಲೋಚನೆಗೆ ತಳ್ಳುವಂಥಹ ವಿಚಾರ.
ಇನ್ನಾದರೂ ಕೇಂದ್ರವು ಇದರ ಬಗ್ಗೆ ಮೌನ ಮುರಿದು ಶಾ ಅವರ ಆರೋಗ್ಯದ ಬಗೆಗಿನ ಮಾಹಿತಿಯನ್ನು ನೀಡಬೇಕಿದೆ. ದೇಶದ ಜನಗಳ ಮತ ಪಡೆದು ಗೆದ್ದು ಬಂದ ರಾಜಕೀಯ ನಾಯಕನ ಅರೋಗ್ಯ, ಆಡಳಿತ ನಿರ್ವಹಿಸುವಷ್ಟು ಶಕ್ತವಾಗಿದಿಯೇ? ಇಲ್ಲವೇ ಎಂಬುದನ್ನು ಸರ್ಕಾರವೇ ಹೇಳಬೇಕು. ಹೀಗೆ ಹೇಳುವದರಿಂದ ಶಾ ಅವರ ಆರೋಗ್ಯವೇನೂ ವಾಸಿಯಾಗುವದಿಲ್ಲ. ಆದರೆ ದೇಶದಲ್ಲಿನ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಇನ್ನಷ್ಟು ಗಾಢಗೊಳ್ಳಬಹುದು.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )