ಮೋದಿ – ಯಡಿಯೂರಪ್ಪ ಭೇಟಿ ಕಾಟಾಚಾರದ್ದೆ?

Team Newsnap
1 Min Read
source- twitter credits - B.S.Y

ಸಂಪುಟ ವಿಸ್ತರಣೆಯ ವಿಷಯವನ್ನು ಚರ್ಚಿಸಲು ದೆಹಲಿಯಲ್ಲಿ ಬಿಡಾರ ಹೂಡಿರುವ ಮುಖ್ಯಮಂತ್ರಿ ಯಡಿಯೂರಪ್ಪರವರದು ಮೋದಿ, ಇತರ ಬಿಜೆಪಿ ನಾಯಕರ ಭೇಟಿ ಕೇವಲ ಕಾಟಾಚಾರದ್ದೇ ಎಂಬ ಅನುಮಾನ ವ್ಯಕ್ತವಾಗಿವೆ.

ದೆಹಲಿಯಲ್ಲಿ ಸಿಎಂ ಯಡಿಯೂರಪ್ಪನವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಚರ್ಚೆಗೆ ಬಂದಿದ್ದೇನೆ’ ಎಂದು ಸಿಎಂ ಹೇಳಿದ್ದರು. ಹಾಗಾಗಿ ಅವರ ದೆಹಲಿ ಭೇಟಿಯಲ್ಲಿ ಅಭಿವೃದ್ಧಿ ಯೋಜನೆಗಳ, ಹಣಕಾಸು ನೆರವಿನ ಪ್ರಸ್ತಾಪ ಇರಲಿದೆಯೋ ಇಲ್ಲವೋ ಎಂಬ ಸಂಶಯಗಳು ತೀವ್ರವಾಗಿವೆ.

ಪ್ರಸ್ತುತ ರಾಜ್ಯದಲ್ಲಿ ಕೊರೋನಾ ಕಾರಣದಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಿವೆ. ಇದರ ಜೊತೆ ಭ್ರಷ್ಟಾಚಾರವೂ ಹೆಚ್ಚಿದೆ. ಖಜಾನೆ ಬರಿದಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕಿಸುತ್ತಿವೆ. ಮುಂದಿನ‌ವಾರ ವಿಧಾನ ಸಭಾ ಅಧಿವೇಶನ ನಡೆಯುವದರಿಂದ ‘ಕೇಂದ್ರದ ಬಳಿ‌ ಹಣ ಕೇಳಿದ್ದೇವೆ’ ಎಂದು ಬಿಂಬಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ. ಸಚಿವ ಸಂಪುಟದ. ಸಮಸ್ಯೆಯೇ ಅವರಿಗೆ ದೊಡ್ಡದಾಗಿ ಕಾಣುತ್ತಿದೆ, ರಾಜ್ಯದ ಸಮಸ್ಯೆಗಳಲ್ಲ, ಎನ್ನಲಾಗುತ್ತಿದೆ.

ಸದ್ಯ ಅಮಿತ್ ಶಾ ಅವರ ಆರೋಗ್ಯ ಸರಿ ಇಲ್ಲ. ಸಚಿವ ಸಂಪುಟದ ವಿಷಯ ಇತ್ಯರ್ಥವಾಗುವ ಯಾವುದೇ ಲಕ್ಷಣಗಳಿಲ್ಲ. ನಾಯಕ ಬದಲಾವಣೆಯ ಸುದ್ದಿ ಇನ್ನಷ್ಟು ಗಂಭಿರ ರೂಪ ಪಡೆದುಜೊಂಡು ತಮ್ಮ ಸ್ಥಾನಕ್ಕೆ ಕುತ್ತು ಬಂದರೆ ತಮ್ಮನ್ನು ಕಾಯುವಂತೆ ಕೇಳಿಕೊಳ್ಳಲು ಅವರು ಮೋದಿಯವರನ್ನು ಭೇಟಿಯಾಗಿದ್ದಾರೆ ಎಂಬ ಮಾತುಗಳು ಓಡಾಡುತ್ತಿವೆ.

ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸಲು ಯಡಿಯೂರಪ್ಪನವರು ‘ನಾನು ಪ್ರಯತ್ನ ಮಾಡಿದ್ದೇನೆ’ ಎಂದು ತೋರಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ. ಯಡಿಯೂರಪ್ಪನವರದು ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ’ ಎಂಬ ಸಂಶಯಗಳು ದಟ್ಟವಾಗುತ್ತಿವೆ.

Share This Article
Leave a comment