ನ್ಯೂಸ್ ಸ್ನ್ಯಾಪ್
ಬೆಂಗಳೂರು
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿ ಇರುವ ನಟಿ ರಾಗಿಣಿ, ಡ್ರಗ್ಸ್ ಅಂಶ ಪತ್ತೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಮೂತ್ರದ ಬದಲಿಗೆ ನೀರು ಕೊಟ್ಟು ವೈದ್ಯರನ್ನು ಯಾಮಾರಿಸುವ ಪ್ರಯತ್ನ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಘಟನೆ ಸಂಬಂಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯದಲ್ಲಿ ನಟಿ ರಾಗಿಣಿಯವರು ಪರೀಕ್ಷೆಗೆ ಸಹಕರಿಸದೇ ಇರುವ ಅಂಶ ಬೆಳಕಿಗೆ ಬಂದಿದೆ.
ನಡೆದದ್ದು ಇಷ್ಟು
ನಟಿ ರಾಗಿಣಿಯವರಲ್ಲಿ ಡ್ರಗ್ಸ್ ಅಂಶ ಪತ್ತೆ ಮಾಡಲು ರಕ್ತ, ಮೂತ್ರ ಹಾಗೂ ಕೂದಲು ಪರೀಕ್ಷೆಗೆ ನ್ಯಾಯಾಲಯದಿಂದ ಅನುಮತಿ ಪಡೆದ ಸಿಸಿಬಿ ಪೋಲಿಸರು ರಾಗಿಣಿಯವರನ್ನು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ವೇಳೆ ಸಹಕಾರ ನೀಡದೇ, ತಮ್ಮ ವಕೀಲರನ್ನು ಸ್ಥಳಕ್ಕೇ ಕರೆಸುವಂತೆ ಪಟ್ಟು ಹಿಡಿದರು. ಈ ಎಲ್ಲಾ ಅಂಶಗಳನ್ನು ರೆಕಾರ್ಡ್ ಮಾಡಲಾಗಿದೆ. ನಂತರ ಮೂತ್ರ ಪರೀಕ್ಷೆಗೆ ನೀರು ಕೊಟ್ಟದ್ದಿದ್ದಾರೆ. ಮೂತ್ರವನ್ನು ನೋಡಿದ ನರ್ಸ್ ಕೂಡಲೇ ಅನುಮಾನಗೊಂಡು ಸಿಸಿಬಿ ಅಧಿಕಾರಿಗಳಗೆ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಲಾಗಿ ರಾಗಿಣಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪರೀಕ್ಷೆಗೆ ವಿರೋಧಿಸಿದ ರಾಗಿಣಿ ‘ ನನ್ನ ಜೀವನ ಹಾಳಾಗಿ ಹೋಗಿದೆ. ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಹೇಳಿದ ಮಾತುಗಳೂ ಸಹ ದೃಶ್ಯಮುದ್ರಿಕೆಯಲ್ಲಿವೆ.
ನಂತರ ನಸ್೯ ನೆರವಿನಿಂದ ಪರೀಕ್ಷೆಗೆ ಮೂತ್ರ ಪಡೆಯಿಲಾತು ಎಂದು ಮಹಿಳಾ ಪೋಲಿಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು