ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭಿಸಲು ಸೂಚಿಸಲಾಗಿದೆ. ಆದರೆ ಅನ್ನದಾನಕ್ಕೆ ಮಾತ್ರ ಅವಕಾಶವಿಲ್ಲ ಮಾತ್ರವಲ್ಲ ಯಾವುದೇ ರೀತಿಯ ಸಭೆ
ಸಮಾರಂಭವನ್ನೂ ಕೂಡ ಮಾಡುವಂತಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪೂಜಾರಿ ಆರೋಗ್ಯ ಇಲಾಖೆ ಅನುಮತಿ ಪಡೆದುಕೊಂಡು ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ
ಆರಂಭಿಸಲಿದ್ದೇವೆ. ಕೊರೋನಾ ಮಾರ್ಗ ಸೂಚಿಯಂತೆ ನೂರಾರು ಜನರು ಸೇರಲು ಅವಕಾಶವಿಲ್ಲ. ಬದಲಿಗೆ 10-15 ಜನರು ಸೇವೆ ಧಾರ್ಮಿಕ ಸೇವೆ ಮಾಡಲು ಅಡ್ಡಿಯಿಲ್ಲ.
ಸಾಮೂಹಿಕ ಅನ್ನದಾನವನ್ನು ಮಾಡುವುದಕ್ಕೆ ಅನುಮತಿ ಇಲ್ಲ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು