January 28, 2026

Newsnap Kannada

The World at your finger tips!

kumarswamy

ನನಗೆ ಮತ್ತು ಬರುವುದಿಲ್ಲ, ಬರಿಸಲೂ ಬರುವುದಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ

Spread the love

ರಾಮನಗರ

ನನಗೆ ಯಾವುತ್ತು ಮತ್ತು ಬರಿಸೋದಿಕ್ಕೆ ಬರೋದಿಲ್ಲ. ಅಧಿಕಾರದಲ್ಲಿದ್ದಲೂ, ಇಲ್ಲದಿದ್ದಾಗಲೂ ಮತ್ತು ಬರೋದಿಲ್ಲ ಕೆಲವರಿಗೆ ಅಧಿಕಾರ ಬಂದಾಗ ಮತ್ತು ಬರುತ್ತದೆ, ಅದು ನನಗೆ ಬಂದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಷಷ್ಟ ಪಡಿಸಿದರು.

ಚನ್ನಪಟ್ಟಣದ ಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ – ‘ನನ್ನ ಸರ್ಕಾರ ಹೇಗೆ ಪಥನ ಆಯಿತು ಎಂಬುದರ ಬಗ್ಗೆ ನಾನು ಮಾತನಾಡಿದ್ದೇನೆ. ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು’.

ನಾನು ಮಾತನಾಡುವ ಪ್ರತಿ ಪದದಲ್ಲೂ ಗೊಂದಲವಿರುವುದಿಲ್ಲ. ನಾನು ನೇರವಾಗಿ ಮಾತನಾಡುವ ವ್ಯಕ್ತಿ
ಬಿಜೆಪಿಯವರ ಮನಸ್ಸು ಕಳ್ಳನ ಮನಸ್ಸು ಇದ್ದ ಹಾಗೆ. ಸದಾ ಹುಳ್ ಹುಳ್ಗೆ ಇರುತ್ತದೆ. ಅವರು ಯಾಕೆ ಬೆನ್ನು ಕರೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು

ಡ್ರಗ್ಸ್ ಮಾಫಿಯಾ ವಿಚಾರದಲ್ಲಿಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು.
ಕ್ರಿಕೆಟ್, ಕಾನೂನು ಬಾಹಿರ ಡ್ಯಾನ್ಸ್ ಬಾರ್ ನಡೆಸುತ್ತಿರುವವರು ಹಣ ಸಂಗ್ರಹಿಸಿ ನನ್ನ ಸರ್ಕಾರ ಪಥನಗೊಳಿಸಲು ಹೊರಟಿತ್ತು ಎಂದು ಹೇಳಿರುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಯಾವುದೇ ಗಲಾಟೆಯಾದ ಆರಂಭದಲ್ಲಿ ಸಂಧರ್ಭದಲ್ಲಿ ಇರುವ ಬಿಸಿ ಆರು ತಿಂಗಳ ಬಳಿಕ ಅದೇ ರೀತಿ ಇರೋದಿಲ್ಲ. ಇದಕ್ಕೆಮಂಗಳೂರು ಘಟನೆಗಳೇ ಸಾಕ್ಷಿ. ಮಂಗಳೂರಿನ ತನಿಖೆ ಯಾವ ಹಂತದಲ್ಲಿ ಇದೆ ಎಂದು ಪ್ರಶ್ನಿಸಿದರು.

error: Content is protected !!