ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿಯವರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್ ಡಿ ಪಿ ಎಸ್ ನ್ಯಾಯಾಲಯ ಮತ್ತೆ ಸೆಪ್ಟೆಂಬರ್ ೧೯ಕ್ಕೆ ಮುಂದೂಡಿದೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದ ವಶದಲ್ಲಿದ್ದ ನಟಿ ರಾಗಿಣಿ, ತಾವು ಸಿಸಿಬಿ ಕಸ್ಟಡಿಯಲ್ಲಿದ್ದಾಗಲೇ ಜಾಮೀನು ಕೋರಿ ಸಿವಿಲ್ ಕೋರ್ಟ್ ಗೆ ಅರ್ಜಿ ಹಾಕಿದ್ದರು. ಆಗ ಸಿವಿಲ್ ಕೋರ್ಟ್ ನ ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದಿಗೆ (ಸೆಪ್ಟೆಂಬರ್ ೧೬) ಮುಂದೂಡಿದ್ದರು.
ರಾಗಿಣಿಯವರು ಈಗ ಕೇಂದ್ರ ಕಾರಾಗೃಹದಲ್ಲಿರುವದರಿಂದ ಜಾಮೀನು ಅರ್ಜಿಯ ವಿಚಾರಣೆ ಎನ್.ಡಿ.ಪಿ.ಎಸ್ ನ್ಯಾಯಾಲಯಕ್ಕೆ ವರ್ಗವಾಗಿತ್ತು. ಸದ್ಯ ರಾಗಿಣಿ, ರಾಹುಲ್, ರವಿಶಂಕರ್, ವೀರೇನ್ ಖನ್ನಾ ಹಾಗೂ ಲೂಯಿ ಪೆಪ್ಪರ್ ಇವರೆಲ್ಲರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು