ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರೇಮ ಮಂದಿರ ತಾಜ್ ಮಹಲ್ ಭೇಟಿಗೆ ನಿರಾಕರಿಸಿಲಾಗಿತ್ತು. ಈಗ ತಾಜ್ ಮಹಲ್ ವೀಕ್ಷಣೆಗೆ ಕೇಂದ್ರ ಪುರಾತತ್ವ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಪ್ರವಾಸಿಗರು ತಾಜ್ ಮಹಲ್ ನ್ನು ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನ್ ಒಳಗಾಗುವಂತೆ ಕಡ್ಡಾಯ ಸೂಚನೆ ನೀಡಲಾಗಿದೆ. ಹಾಗೆಯೇ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಮುಮ್ತಾಜ್ ಸಮಾಧಿಗೆ ಒಂದು ಬಾರಿ ಐದು ಜನ ಮಾತ್ರ ಭೇಟಿ ನೀಡುಬಹುದಾಗಿದೆ. ಮಹಲ್ ಅಲ್ಲಿ ಫೋಟೋ ತೆಗೆಯುವದನ್ನು ನಿಷೇಧ ಮಾಡಲಾಗಿದೆ. ಮಹಲ್ ನ ಗೋಡೆ ಮುಟ್ಟುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಖರೀದಿಸಿದವರು ತಾಜ್ ಮಹಲ್ ವೀಕ್ಷಣೆ ಮಾಡಬಹುದಾಗಿದೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )