ಬೆಂಗಳೂರು ನಗರದ ವಿದೇಶಿ ಅಂಚೆ ಕಚೇರಿಯ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ದ್ರವ್ಯ ಪತ್ತೆ ಮಾಡಿದ್ದಾರೆ.
ಫ್ರಾನ್ಸ್ ದೇಶದಿಂದ ಭಾರತಕ್ಕೆ ಕಳ್ಳಸಾಗಾಣಿಕೆಗೆ ಯತ್ನ ಮಾಡಲಾಗಿದೆ. ಫೂಟ್ ಮಸಾಜರ್ನಲ್ಲಿ ಬಚ್ಟಿಟ್ಟು ಎಂ.ಡಿ.ಎಂ.ಎ ಮಾದಕ ದ್ರವ್ಯ ಸಾಗಿಸುವ ಪ್ರಯತ್ನ ನಡೆದಿತ್ತು.
ವಿದೇಶಿ ಅಂಚೆ ಕಚೇರಿ ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ಅನುಮಾನದ ಮೇಲೆ ಈ ಪಾರ್ಸಲ್ ತಪಾಸಣೆ ನಡೆಸಿದರು. ಫ್ರಾನ್ಸ್ನಿಂದ ಬಂದಿದ್ದ ಈ ಪಾರ್ಸಲ್ನಲ್ಲಿ 2.345 ಕೆಜಿ ತೂಕದ 1.25 ಕೋಟಿ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ಪತ್ತೆಯಾಗಿದೆ. ಕಸ್ಟಮ್ಸ್ ಕಮಿಷನರೇಟ್ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ.
ವಿದೇಶಗಳಿಂದ ಮೇಲಿಂದ ಮೇಲೆ ಡ್ರಗ್ಸ್ ಮಾರಾಟ ಮಾಡಲು ಯತ್ನಗಳು ನಡೆಯುತ್ತಿದ್ದು ಸರ್ಕಾರ ಮತ್ತಷ್ಟು ಕಾನೂನು ಬಿಗಿಗೊಳಿಸಿ, ತನಿಖೆ ಚುರುಕುಗೊಳಿಸುವ ಅವಶ್ಯಕತೆ ಹೆಚ್ಚಾಗಿದೆ. ಫ್ರಾನ್ಸ್, ರಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಬರುವ ಡ್ರಗ್ಸ್ ಮಾರಾಟ ಜಾಲ ಹೆಚ್ಚುತ್ತಿರುವ ಆತಂಕ ಮನೆಮಾಡಿದೆ. ಇದರಿಂದ ಅಂತರ್ ರಾಷ್ಟ್ರೀಯ ಭದ್ರತೆ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಬೇರೆ ದೇಶಗಳಿಂದ ಡ್ರಗ್ಸ್ ಕಳಿಸುತ್ತಿರುವುದು ನಿಜ ಅಂದ ಮೇಲೆ ಇಲ್ಲಿ ಅದನ್ನ ಪಡೆದುಕೊಳ್ಳಲು ಇಲ್ಲಿ ಯಾರಾದ್ರೂ ಇರಲೇಬೇಕು. ಅಂತಹ ಕೈಗಳಿಗೆ ಕೋಳ ತೊಡಿಸಿ ಚೈನ್ ಲಿಂಕ್ ಕಟ್ ಮಾಡುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ